ಬ್ರಹ್ಮಾವರ ಎಂ.ಸಿ.ಸಿ ಬ್ಯಾಂಕ್ ನ 17 ನೇ ಶಾಖೆ ಉದ್ಘಾಟನೆ: ಸಾರವಜನಿಕರ ಸಹಕಾರದಿಂದ ಸಹಕಾರಿ ರಂಗ ಮುನ್ನಡೆ: ಯಶ್ ಪಾಲ್ ಸುವರ್ಣ

ಬ್ರಹ್ಮಾವರ: ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿ
ಬ್ಯಾಂಕಿನ 17 ನೇ ಶಾಖೆಯು ಬ್ರಹ್ಮಾವರದ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಮಿನಿ ವಿಧಾನಸೌಧದ ಹತ್ತಿರ, ವಾರಂಬಳ್ಳಿಯಲ್ಲಿ ಮಾ. 3 ರಂದು ಉದ್ಘಾಟನೆಗೊಂಡಿತು.

ಹೊಸ ಶಾಖೆಯ ಉದ್ಘಾಟನೆಯನ್ನು ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿ ಮಾತನಾಡಿ, ಬ್ರಹ್ಮಾವರದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿರುವ ಎಂ.ಸಿ.ಸಿ ಬ್ಯಾಂಕಿಗೆ ಶುಭ ಹಾರೈಸಿದರು.

ಆರ್.ಬಿ.ಐ ಮಾನದಂಡದೊಂದಿಗೆ ಸಹಕಾರಿ ರಂಗವನ್ನು ಮುನ್ನಡೆಸುವುದು ಹೂವಿನ ಹಾಸಿಗೆಯಲ್ಲ. ಆದರೂ, ಸಾರ್ವಜನಿಕರ ಸಹಕಾರ ಮತ್ತು ಪರಸ್ಪರ ಬೆಂಬಲದೊಂಗೆ ಸಹಕಾರ ರಂಗ ಯಶಸ್ವಿಯಾಗಿ
ಮುನ್ನಡೆಯುತ್ತಿದೆ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊರವರ ಕಾರ್ಯತತ್ಪರತೆ ಮತ್ತು
ಅವರ ಸಾಮಾಜಿಕ ಕಾಳಜಿಯನ್ನು ಮೆಚ್ಚಿದ ಆವರು, ಎಂ.ಸಿ.ಸಿ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಹೋಲಿ ಫ್ಯಾಮಲಿ ಚರ್ಚ್, ಬ್ರಹ್ಮಾವರ ಇದರ ಧರ್ಮಗುರುಗಳಾದ ವಂದನೀಯ ಜಾನ್ ಫೆರ್ನಾಂಡಿಸ್‌ಆಶೀರ್ವಚನವನ್ನು ನೆರವೇರಿಸಿದರು. ಹೊಸ ಶಾಖೆಯ ಭದ್ರತಾ ಕೊಠಡಿಯನ್ನು ಬ್ರಹ್ಮಾವರ ಎಸ್.ಎಂ.ಒ.ಎಸ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ಮತ್ತು ಒ.ಎಸ್.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೆ|ಫಾ| ಎಂ.ಸಿ. ಮಥಾಯಿ ಉದ್ಘಾಟಿಸಿದರು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ|ಫಾ| ಡೆನಿಸ್ ಡೆಸಾ ಇ-ಸ್ಟಾಂಪಿಂಗ್ ಸೌಲಭ್ಯವನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ “ಸಹಕಾರ ರತ್ನ” ಅನಿಲ್ ಲೋಬೊ ಮಾತನಾಡಿ, ಎಂ.ಸಿ.ಸಿ ಬ್ಯಾಂಕಿಗೆ ಬ್ರಹ್ಮಾವರದ ಜನತೆ ನೀಡಿದ ಸ್ವಾಗತಕ್ಕೆ ಧನ್ಯವಾದ ಅರ್ಪಿಸಿ ಎಂ.ಸಿ.ಸಿ
ಬ್ಯಾಂಕ್ ಸಾಮಾನ್ಯ ಬ್ಯಾಂಕ್ ಆಗಿರದೆ ತಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಬ್ಯಾಂಕ್ ಆಗಿರಲಿದೆ. ಉತ್ತಮ ಪರಿಸರದಲ್ಲಿ ಒಳ್ಳೆಯ ಪಾರ್ಕಿಂಗ್ ಹೊಂದಿರುವ ಬ್ರಹ್ಮಾವರ ಶಾಖೆಯು ಗ್ರಾಹಕ ಕೇಂದ್ರಿತ ಉನ್ನತ ಸೇವೆ ನೀಡುವತ್ತ ಮುನ್ನಡೆಯಲಿದೆ. ಪರಿಸರದ ಯಾವುದೇ ಬ್ಯಾಂಕಿಗೆ ಕಮ್ಮಿಯಿಲ್ಲದ ಮತ್ತು ದಕ್ಷತೆಯಿಂದ
ಕೂಡಿದ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರುತ್ತದೆ. ಈಗಾಗಲೇ ಬ್ಯಾಂಕ್ 1000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ದಾಟಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾರ್ವಜನಿಕರ ಬೆಂಬಲ ಅಗತ್ಯ ಎಂದರು.
112 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ಸುಧೃಡವಾಗಿದ್ದು ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪಾಲಿಸಿ, ಆರ್ಥಿಕವಾಗಿ ಸುಧೃಡ ಮತ್ತು ಉತ್ತಮವಾಗಿ ನಿರ್ವಹಿಸುವ ಬ್ಯಾಂಕ್ ಎಂದು ವರ್ಗೀಕೃತವಾಗಿದೆ. ಬ್ಯಾಂಕ್ ಸದ್ಯದಲ್ಲಿಯೇ ಬೆಳ್ತಂಗಡಿ, ಕಾವೂರು ಹಾಗೂ ಶಿವಮೊಗ್ಗ
ಪರಿಸರದಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ ಹಾಗೂ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುವುದು ಎಂದರು.

ಹೋಲಿ ಫ್ಯಾಮಲಿ ಚರ್ಚ್ನ ಧರ್ಮಗುರುಗಳಾದ ವಂದನೀಯ ಜಾನ್ ಫೆರ್ನಾಂಡಿಸ್‌ ಮಾತನಾಡಿ, ಬ್ರಹ್ಮಾವರ ಪರಿಸರದಲ್ಲಿ ಶಾಖೆಯ ಪ್ರಗತಿಯಾಗಲಿ ಎಂದು ಆಶಿಸಿದರು. ತಮ್ಮ ಪೂರ್ಣ
ಸಹಕಾರ ಮತ್ತು ಬೆಂಬಲದ ಭರವಸೆ ನೀಡಿದರು.

ಕಥೊಲಿಕ್ ಶಿಕ್ಷಣ ಸಂಸ್ಥೆ, ಉಡುಪಿ (ಸೆಸು) ಇದರ ಕಾರ್ಯದರ್ಶಿ ರೆ|ಫಾ|ವಿನ್ಸೆಂಟ್ ಕ್ರಾಸ್ತಾ, ಬ್ಯಾಂಕಿನ ವತಿಯಿಂದ ಅಬಲರಿಗೆ ಮತ್ತು ಅಶಕ್ತರಿಗೆ ಆರ್ಥಿಕ ಸಹಾಯಧನ ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ|ಫಾ| ಡೆನಿಸ್ ಡೆಸಾ ಮಾತನಾಡಿ,
ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯ ಉದ್ಘಾಟನೆಯನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲಿ ಬ್ಯಾಂಕ್ ಉತ್ತಮವಾದ ಸೇವೆಯನ್ನು ನೀಡಿ ಇನ್ನಷ್ಟು ಬೆಳವಣಿಗೆಯನ್ನು ಕಾಣಲಿ ಎಂದು ಆಶಿಸಿದರು.

ಬ್ರಹ್ಮಾವರ ಎಸ್.ಎಂ.ಒ.ಎಸ್. ಕ್ಯಾಥೆಡ್ರಲ್ ನ ವಿಕಾರ್ ಜನರಲ್ ಮತ್ತು ಒ.ಎಸ್.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೆ|ಫಾ| ಎಂ.ಸಿ. ಮಥಾಯಿಯವರು ಎಂ.ಸಿ.ಸಿ ಬ್ಯಾಂಕಿಗೆ ಶುಭಹಾರೈಸಿ ಎಂ.ಸಿ.ಸಿ
ಬ್ಯಾಂಕಿನ ಸಾರ್ವಜನಿಕ ಕಾಳಜಿಯನ್ನು ಕೊಂಡಾಡಿದ ಅವರು ಬ್ರಹ್ಮಾವರದ ಪರಿಸರದ ನಿವಾಸಿಗಳು ಎಂ.ಸಿ.ಸಿ ಬ್ಯಾಂಕಿಗೆ ಎಲ್ಲಾ ಸಹಕಾರವನ್ನು ನೀಡಬೇಕೆಂದು ಕೋರಿದರು.

ಬ್ರಹ್ಮಾವರದ ಪರಿಸರದ ಸಾಧಕರನ್ನು ಹೂಗುಚ್ಛ ಮತ್ತು ಸ್ಮರಣಿಕೆ ನೀಡಿ ಬ್ಯಾಂಕಿನ ವತಿಯಿಂದ
ಸನ್ಮಾನಿಸಲಾಯಿತು.

ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್ ಮತ್ತು ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ನಿಕಟಪೂರ್ವ ಅಧ್ಯಕ್ಷ ಜನಾಬ್ ಕೆ.ಪಿ. ಇಬ್ರಾಹಿಂ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿ ಸಂಧರ್ಬೋಚಿತವಾಗಿ ಮಾತಾನಾಡಿದರು.

ಕೊಂಕಣಿ ಬರಹಗಾರರ ಸಂಘ, ಇವರು ಪ್ರಧಾನ ಮಾಡಿರುವ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿರುವ ಬ್ಯಾಂಕಿನ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇವರನ್ನು ಬ್ಯಾಂಕಿನ ವತಿಯಿಂದ ಅಧ್ಯಕ್ಷ ಅನಿಲ್ ಲೋಬೊ ಸನ್ಮಾನಿಸಿದರು.

ಹೊಸ ಶಾಖಾ ಕಟ್ಟಡದ ಮಾಲೀಕ ಚಂದಯ್ಯ ಶೆಟ್ಟಿ, ಮತ್ತು ಕಟ್ಟಡದ ವಿನ್ಯಾಸವನ್ನು ನೆರವೇರಿಸಿದ ಸಿವಿಲ್ ಇಂಜಿನಿಯರ್ ಕಾರ್ತಿಕ್ ಕಿರಣ್ ಇವರನ್ನು ಸನ್ಮಾನಿಸಲಾಯಿತು.

ಬ್ರಹ್ಮಾವರ ಶಾಖೆಯ ಸಿಬ್ಬಂದಿಗಳನ್ನು ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್‌ರ ಪರಿಚಯಿಸಿದರು.
ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಲು ಮತ್ತು ಬ್ರಹ್ಮಾವರ ಪರಿಸರದ ನಿವಾಸಿಗಳಿಗೆ ಬ್ಯಾಂಕಿನ ಸೇವೆಗಳ ಬಗ್ಗೆ ಮಾಹಿತಿ ನೀಡಲು ಸಹಕರಿಸಿದ ಸರ್ವರನ್ನು ಇದೇ ಸಂಧರ್ಭದಲ್ಲಿ
ಸನ್ಮಾನಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕ ಆಂಡ್ರ್ಯೂ ಡಿ’ಸೋಜಾ, ಡೇವಿಡ್ ಡಿ’ಸೋಜಾ, ಹೆರಾಲ್ಡ್ ಮೊಂತೇರೊ, ಅನಿಲ್ ಪತ್ರಾವೊ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ್ಹಾ ಫೆಲಿಕ್ಸ್ ಡಿಕ್ರುಜ್, ಆಲ್ವಿನ್ ಮೊಂತೋರೊ, ಶರ್ಮಿಳಾ ಮಿನೇಜಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ಎಲ್‌ರೊಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ನಿರ್ದೇಶಕ ಡಾ. ಜೆರಾಲ್ಡ್ ಪಿಂಟೊ ವಂದಿಸಿ, ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.