ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕರಾಗಿ ಆಯ್ಕೆಯಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಬ್ಯಾಂಕಿನ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಅವರು ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಯಶ್ ಪಾಲ್ ಅವರು, ಜಯಕರ ಶೆಟ್ಟಿಯವರು ಸಹಕಾರ ಕ್ಷೇತ್ರದ ತಮ್ಮ ವಿಶಿಷ್ಟ ಸೇವೆಯಿಂದಾಗಿ ಅರ್ಹವಾಗಿಯೇ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಇವರ ಈ ಸೇವೆ ಸಹಕಾರಿ ಕ್ಷೇತ್ರದವರಿಗೆ ಆದರ್ಶವಾಗಲಿ ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವರಿಗೂ ವಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಅಜ್ಜರಕಾಡು ವಾರ್ಡಿನ ನಗರಸಭಾ ಸದಸ್ಯ ರಶ್ಮಿ ಸಿ. ಭಟ್, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಬ್ಯಾಂಕಿನ ನಿರ್ದೇಶಕ ವಿನಯ ಕರ್ಕೇರ, ಎನ್. ಟಿ. ಅಮೀನ್, ಸುರೇಶ್ ಬಿ.ಕರ್ಕೇರ, ಶಿವರಾಮ ಕುಂದರ್, ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್. ಕೆ, ಸಲಹೆಗಾರರರಾದ ಆನಂದ ಪುತ್ರನ್, ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕ ಜಿ. ಕೆ. ಶೀನ ಉಪಸ್ಥಿತರಿದ್ದರು.