ಮದುವೆಗೆ ಮುನ್ನವೇ ಗರ್ಭಿಣಿಯಾದ ಸಂಗತಿಯನ್ನು ತಿಳಿಸುವ ಮೂಲಕ ದೊಡ್ಡ ಸುದ್ದಿ ಮಾಡಿದ್ದ ನಟಿ ಆಮಿ ಜಾಕ್ಸನ್ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿದೆ. ಮೇ 5ಕ್ಕೆ ಆಮಿ ಹಾಗೂ ಜಾರ್ಜ್ ಎಂಗೇಜ್ ಮೆಂಟ್ ನಡೆಯಲಿದೆ. ತಮ್ಮ ಗೆಳೆಯ ಜಾರ್ಜ್ ಜತೆಗೆ ನಿಶ್ಚಿತಾರ್ಥ ಲಂಡನ್ ನಲ್ಲಿ ಎಂಗೇಜ್ ಮೆಂಟ್ ಕಾರ್ಯಕ್ರಮ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರಂತೆ. ಗ್ರೀಕ್ ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಉದ್ಯಮಿ ಜಾರ್ಜ್ ಜೊತೆಗೆ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದ ಆಮಿ ಅವರನ್ನು ವಿವಾಹ ಆಗುತ್ತಿದ್ದಾರೆ. ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಜೋಡಿಯ ದಿ ವಿಲನ್ ಮೂಲಕ ಆಮಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು.