ಹಿರಿಯಡ್ಕ: ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಹಾಲು ಡೈರಿಯ ಎದುರಿನ ಸಾರ್ವಜನಿಕ ರಸ್ತೆಯ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಬಂಧಿತ ಆರೋಪಿಯನ್ನು ಪ್ರವೀಣ್ ಕೆ ಎಂದು ಗುರುತಿಸಲಾಗಿದೆ. ಈತ ಆತ್ರಾಡಿ ಗ್ರಾಮದ ಹಾಲು ಡೈರಿಯ ಎದುರಿನ ಸಾರ್ವಜನಿಕ ರಸ್ತೆಯ ಬಳಿ ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಹಿರಿಯಡಕ ಠಾಣೆಯ ಪಿಎಸ್ ಅನಿಲ್ ಬಿ ಮಾದರ ಹಾಗೂ ಸಿಬ್ಬಂದಿ, ಆರೋಪಿ ಪ್ರವೀಣ್ ನನ್ನು ವಶಕ್ಕೆ ಪಡೆದು ಆತನಿಂದ ಜುಗಾರಿ ಆಟಕ್ಕೆ ಸಂಗ್ರಹಿಸಿದ ₹ 1240 ರೂ. ನಗದು ಹಾಗೂ ಮಟ್ಕಾ ಚೀಟಿ ಸಹಿತ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.