ಬೆಂಗಳೂರು: ಡ್ರಗ್ಸ್ ಮಾಫಿಯಾದ ನಂಟಿನ ಆರೋಪದಡಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ಜಾರಿ ಮಾಡುತ್ತಿದ್ದಂತೆ ರಾಗಿಣಿ ಸಾಕ್ಷ್ಯ ನಾಶ ಮಾಡಲು ಮಾಸ್ಟರ್ ಫ್ಲ್ಯಾನ್ ಹೆಣೆದಿದ್ದಾರೆ.
ರಾಗಿಣಿ ಆಪ್ತ ರವಿಶಂಕರ್ ಅನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಸಂದೇಶ ತನಗೆ ಮುಳುವಾಗುವ ಸಾಧ್ಯತೆ ಇದೆ ಎಂದು ಊಹಿಸಿ, ವಿಚಾರಣೆ ಹಾಜರಾಗದೆ ಸಾಕ್ಷ್ಯ ನಾಶಕ್ಕೆ ರಾಗಿಣಿ ಯತ್ನಿಸಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈಗಾಗಲೇ ಮೊಬೈಲ್ ನಿಂದಾಗಿ ರಾಗಿಣಿ ಆಪ್ತ ರಾಹುಲ್ ಸಿಸಿಬಿಗೆ ಸಿಕ್ಕಿಬಿದ್ದಿದ್ದರು. ಇದೇ ಭಯದಿಂದ ರಾಗಿಣಿ ಮೊಬೈಲ್ ಬದಲಾವಣೆ ಮಾಡಿದ್ದಾರೆ. ಹೊಸ ಮೊಬೈಲ್ ಖರೀದಿಸಿ ವಾಟ್ಸಾಪ್ ಇನ್ ಸ್ಟಾಲ್ ಮಾಡಿದ್ದರು. ತನ್ನ ಮೊಬೈಲ್ ನಲ್ಲಿದ್ದ ವಾಟ್ಸಾಪ್ ಸಂದೇಶ ಡಿಲೀಟ್ ಮಾಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.