ಇಸ್ಲಾಮಾಬಾದ್: ಶನಿವಾರ ಬೆಳಗ್ಗೆ ಪಂಜಾಬ್‌ನ ಮಿಯಾನ್‌ವಾಲಿಯ ಮಧ್ಯ ಪಾಕಿಸ್ತಾನದ ಪ್ರದೇಶದಲ್ಲಿರುವ ವಾಯುಪಡೆಯ ತರಬೇತಿ ನೆಲೆಯ ಮೇಲೆ ಆರು ಉಗ್ರರು ದಾಳಿ ನಡೆಸಿದ್ದಾರೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಮೂವರು ಉಗ್ರಗಾಮಿಗಳು ನೆಲೆಯನ್ನು ಪ್ರವೇಶಿಸುವ ಮೊದಲೆ ಕೊಲ್ಲಲ್ಪಟ್ಟರು ಮತ್ತು ಇತರ ಮೂವರನ್ನು ಬಂಧಿಸಲಾಯಿತು. ಭಯೋತ್ಪಾದಕ ದಾಳಿಯಲ್ಲಿ ಮೂರು ವಿಮಾನಗಳು ಮತ್ತು ಇಂಧನ ತುಂಬುವ ಟ್ಯಾಂಕರ್ ಹಾನಿಗೊಳಗಾಗಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ ಜಿಹಾದ್ (ಟಿಟಿಪಿ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ. ಪ್ರದೇಶವನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಿಲಿಟರಿ ಹೇಳಿದೆ.