ಲಡಾಖ್: ಭಾರತದಲ್ಲಿ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಮುಖ ಕ್ರಮಗಳಿಗೆ ಬೌದ್ಧ ಸನ್ಯಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬೌದ್ಧ ಸನ್ಯಾಸಿಗಳು ಭಾನುವಾರ ಲಡಾಖ್ನಲ್ಲಿ ಶಾಂತಿ ನಡಿಗೆಯಲ್ಲಿ ನಡೆಸಿದರು. ವಿಶ್ವ ಶಾಂತಿ ಮತ್ತು ಭಾರತದಲ್ಲಿ ಬೌದ್ಧ ಸ್ಥಳಗಳ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ಅವರು ಶ್ಲಾಘಿಸಿದರು.
ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರದ (ಎಂಐಎಂಸಿ) ಸಂಸ್ಥಾಪಕ ಮತ್ತು ಅಧ್ಯಕ್ಷ ಭಿಕ್ಕು ಸಂಘಸೇನ ಶಾಂತಿ ಮೆರವಣಿಗೆ ಉದ್ದೇಶಿಸಿ ಮಾತನಾಡಿ, “ಇಡೀ ಜಗತ್ತು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಶಾಂತಿ, ಸೌಹಾರ್ದತೆ ತರುವ ಮಹಾನ್ ನಾಯಕನ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅಂತಹ ಒಬ್ಬ ಕರ್ಮಯೋಗಿ ನಾಯಕ. ಯೋಗ, ಧ್ಯಾನ ಮತ್ತು ವಸುಧೈವ ಕುಟುಂಬಗಳಂತಹ ಆಧ್ಯಾತ್ಮಿಕ ಮೌಲ್ಯಗಳನ್ನು ಭಾರತ ಮತ್ತು ಪ್ರಪಂಚದ ಅಭಿವೃದ್ಧಿಗೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡುತ್ತಿರುವ ಮಹಾನ್ ನಾಯಕನನ್ನು ಪಡೆದ ಭಾರತ ದೇಶ ಅದೃಷ್ಟಶಾಲಿ” ಎಂದು ಹೇಳಿದರು.ಥಾಯ್ಲೆಂಡ್ನ ಬೌದ್ಧ ಸನ್ಯಾಸಿಗಳು ವಿಶ್ವ ಶಾಂತಿಗಾಗಿ 32 ದಿನಗಳ ಉಪವಾಸ ವ್ರತ ಕೈಗೊಂಡಿದ್ದು, ನಿನ್ನೆ ಲಡಾಖ್ನಲ್ಲಿ ಮುಕ್ತಾಯ ಕಂಡಿತು. ಪ್ರಾರ್ಥನೆ, ಶಾಂತಿ ಸಂದೇಶಗಳೊಂದಿಗೆ ನಡೆದ ಬೃಹತ್ ಶಾಂತಿ ನಡಿಗೆಯಲ್ಲಿ ಇತರೆ ಭಕ್ತರು, ಧಾರ್ಮಿಕ ಸಮುದಾಯಗಳ ಮುಖಂಡರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಮೂಲಕ ವಿಶ್ವ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸಲು ಸಾಥ್ ಕೊಟ್ಟರು. ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ (IMF) ಪ್ರತಿನಿಧಿಗಳೂ ಸಹ ಹೆಜ್ಜೆ ಹಾಕಿದರು
“ನಮ್ಮ ಪ್ರಾಚೀನ ಜ್ಞಾನವಾದ ಮಹಾಕರುಣ, ಅಹಿಂಸೆ, ಯೋಗ, ಧ್ಯಾನ ಮತ್ತು ಮೈತ್ರಿಯೊಂದಿಗೆ ಜಗತ್ತನ್ನು ಮುನ್ನಡೆಸಲು ಇಡೀ ಜಗತ್ತು ಭಾರತ ಮತ್ತು ಪ್ರಧಾನಿ ಮೋದಿಯತ್ತ ನೋಡುತ್ತಿದೆ. ಶಾಂತಿ ಮತ್ತು ಸೌಹಾರ್ದತೆಯನ್ನು ಪಸರಿಸುವ ಮೋದಿಯವರ ನಾಯಕತ್ವದಲ್ಲಿ ಭಾರತವಿದೆ. ಮೋದಿ ಜಾಗತಿಕ ಶಾಂತಿ ತಯಾರಕರಾಗಿ ಹೊರಹೊಮ್ಮಿದ್ದಾರೆ” ಎಂದರು.
ಶಾಂತಿ ನಡಿಗೆಯಲ್ಲಿ ಪಾಲ್ಗೊಂಡವರು : ಥಾಯ್ಲೆಂಡ್, ನೇಪಾಳ, ವಿಯೆಟ್ನಾಂ, ಶ್ರೀಲಂಕಾ, ಭೂತಾನ್ ಮತ್ತು ಯುನೈಟೆಡ್ ಸ್ಟೇಟ್ಸ್ನ ಬೌದ್ಧ ಸನ್ಯಾಸಿಗಳು, ಇತರೆ ಧರ್ಮಗಳ ಮುಖಂಡರು, ಧಾರ್ಮಿಕ ಸಂಸ್ಥೆಗಳು, ಭಕ್ತರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 2,500 ಜನರು ಇದ್ದರು.ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವುದು ಇದರ ಉದ್ದೇಶ. ಥಾಯ್ಲೆಂಡ್ನ ಬೌದ್ಧ ಸನ್ಯಾಸಿಗಳು ಜೂನ್ 12ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಲಡಾಕ್ಗೆ ವಿಶ್ವಶಾಂತಿಗಾಗಿ ಪಾದಯಾತ್ರೆ ಆರಂಭಿಸಿದ್ದರು.ಥಾಯ್ಲೆಂಡ್ನ ಬೌದ್ಧ ವಿಶ್ವ ಒಕ್ಕೂಟದ (ಡಬ್ಲ್ಯುಎಬಿ) ಅಧ್ಯಕ್ಷ ಡಾ. ಪೋರ್ಂಚೈ ಪಲವಧಮ್ಮೋ ‘ಶಾಂತಿ ನಡಿಗೆ’ಯಲ್ಲಿ ಕಂಡುಬಂದರು. “ಭಾರತವು ಬೌದ್ಧ ಧರ್ಮದ ತಾಯ್ನಾಡು. ಇಡೀ ಜಗತ್ತಿಗೆ ಶಾಂತಿಯನ್ನು ಕಲಿಸುತ್ತಿದೆ” ಎಂದು ಹೇಳಿದರು. ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ (IMF) ಸಹ ಸಂಚಾಲಕ ಸತ್ನಮ್ ಸಿಂಗ್ ಸಂಧು ನೇತೃತ್ವದಲ್ಲಿ ಶಾಂತಿ ನಡಿಗೆ ನಡೆಯಿತು.