ಗ್ರೇಟರ್ ನೋಯ್ಡಾದ ಮಾಲ್ ನಲ್ಲಿ ಅಗ್ನಿ ಅವಘಡ: ಪ್ರಾಣ ಉಳಿಸಲು ಮೂರನೇ ಮಹಡಿಯಿಂದ ಜಿಗಿದ ಜನ

ನವದೆಹಲಿ: ಗ್ರೇಟರ್ ನೋಯ್ಡಾ ಗ್ಯಾಲಕ್ಸಿ ಪ್ಲಾಜಾ ಮಾಲ್‌ನಲ್ಲಿ ಗುರುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿರುವುದು ಕಂಡುಬಂದಿದೆ.

ಗೌರ್ ಸಿಟಿ 1ರಲ್ಲಿರುವ ಮಾಲ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜನರು ಕಟ್ಟಡದ ಮೂರನೇ ಮಹಡಿಯಿಂದ ಜಿಗಿಯುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ.

ಬೆಂಕಿ ತಗುಲಿದ ತಕ್ಷಣವೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.