ಒಂದೊಳ್ಳೆ ಕೆಲಸ ಸಿಕ್ಕಿ ಬೇಗ ಮದ್ವೆಯಾಗಿಬಿಟ್ರೆ ಲೈಫ್ ಸೆಟಲ್ಲಾಗಿಬಿಡುತ್ತೆ. ಆ ಮೇಲೆ ಆರಾಮಾಗಿ ಇರಬಹುದು ಅಂತ ಬೇಗ ಮದ್ವೆಯಾಗಿಬಿಡುವ ಹುಡುಗ ಹುಡುಗಿಯರು ಜಾಸ್ತಿ.
ನಾನೊಂದು ಚಂದದ ಹುಡುಗಿಗೆ ಬೇಗ ತಾಳಿ ಕಟ್ಟಬೇಕು ಎಂದು ಆಸೆ ಪಡುವ ಹುಡುಗರು, ತಾನು ಚಂದದ ಹುಡುಗನಿಂದ ಬೇಗ ತಾಳಿ ಕಟ್ಟಿಸಿಕೊಂಡರೆ ಸಾಕು ಅಂತ ಓದು ಮುಗಿಯುವ ಮೊದಲೇ ಮದ್ವೆಯಾಗುವ ಯೋಚನೆಯಲ್ಲಿರುವ ಹುಡುಗಿಯರಿಗೆ ನಾವಿಲ್ಲಿ ಒಂದಷ್ಟು ಸಲಹೆ ನೀಡಿದ್ದೇವೆ. ನಾನು ಬೇಗ ಮದ್ವೆಯಾಗ್ಬೇಕು ಅಂತ ಯೋಚಿಸುವ ಮೊದಲೊಮ್ಮೆ ಈ ಎಲ್ಲಾ ಪಾಯಿಂಟ್ ಗಳನ್ನು ಓದಿಬಿಡಿ. ಆಮೇಲೆ ಮದ್ವೆ ಯೋಚನೆ ಮಾಡಿ.
[ ] ವಿದ್ಯಾಭ್ಯಾಸ ಮುಗಿಯುವವರೆಗೆ ಮದುವೆಯ ಯೋಚನೆ ಮಾಡಲೇಬೇಡಿ.
[ ] ಮದುವೆಯ ನಂತರದ ಓದು ಕಷ್ಟ. ಹಾಗಾಗಿ ಯೋಚಿಸಿ ಮುಂದುವರೆಯಿರಿ.
[ ] ಕೆಲಸ ಮಾಡುವ ಹಂಬಲ ಇರುವವರು ಓದು ಮುಗಿದ ಬಳಿಕ ಎರಡು ವರ್ಷಗಳಾದರೂ ಕೆಲಸದ ಅನುಭವ ಹೊಂದಲು ಪ್ರಯತ್ನ ಮಾಡಿ.
[ ] ಓದಿಗಿಂತ ಕೆಲಸ ನೀಡುವ ಅನುಭವವೇ ವಿಭಿನ್ನ. ನಿಜವಾದ ಮಾನವ ಸಂಬಂಧಗಳ ಅನುಭವ ದೊರೆಯುವುದೇ ಇಲ್ಲಿ. ಅಲ್ಲದೇ ಹೊರ ಪ್ರಪಂಚದ ಅನೇಕ ಅನುಭವಗಳನ್ನು ಪಡೆಯಲು ಕೆಲಸ ಸಹಾಯಕ.
[ ] ಮದುವೆಯ ನಂತರ ಹೆಣ್ಣು ಮಕ್ಕಳು ಮನೆ, ಮಕ್ಕಳು ಎಂದು ಬ್ಯುಸಿ ಆಗುವುದರಿಂದ ಅಥವಾ ಅನಿವಾರ್ಯತೆ ಇಲ್ಲದಿರುವುದರಿಂದ ಕೆಲಸಕ್ಕೆ ಹೋಗುವ ಅವಕಾಶ ಸಿಗದೇ ಹೋಗಬಹುದು. ಹಾಗಾಗಿ ಮದುವೆಗೆ ಮೊದಲೇ ಕೆಲಸ ಮಾಡಿ.
[ ] ವೈಜ್ಞಾನಿಕವಾಗಿ ನಿರೂಪಿತವಾಗಿರುವಂತೆ, ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳಿಗೆ 25-26 ವರ್ಷ ಹಾಗೂ ಗಂಡುಮಕ್ಕಳಿಗೆ 30 ವರ್ಷಗಳವರೆಗೆ ಮದುವೆಯಾಗಲು ಸಮಯವಿದೆ.
[ ] ನಿಮ್ಮೆಲ್ಲಾ ಕನಸು, ಆಸೆಗಳನ್ನು ಪ್ರೋತ್ಸಾಹಿಸುವ ಹುಡುಗ ಅಥವಾ ಹುಡುಗಿ ಸಿಗುವವರೆಗೆ ಸಾವಧಾನವಾಗಿ ಕಾಯಿರಿ.
[ ] ಹಣ, ಸಂಪತ್ತಿಗಿಂತ ಮುಖ್ಯ ಜೀವನ ಪ್ರೀತಿ ಹಾಗೂ ಒಳ್ಳೆಯ ಗುಣ ಎಂಬುದು ತಲೆಯಲ್ಲಿರಲಿ. ನಿಮ್ಮಲ್ಲಿರುವ ಮುಗ್ದತೆ, ಉತ್ಸಾಹ ಬೇಗ ಮದ್ವೆಯಾಗಿಬಿಟ್ಟರೆ ಸಾಂಸಾರಿಕ ಜೀವನದ ಜಂಜಾಟದಲ್ಲಿ, ಜವಾಬ್ದಾರಿಯ ವೇಗದಲ್ಲಿ ಮರೆಯಾಗುವ ಸಾಧ್ಯತೆ ಇದೆ. ಬ್ಯಾಚುಲರ್ ಲೈಫ್ ನ ಖುಷಿಯನ್ನು ಬೇಗ ಕಳೆದುಕೊಳ್ಳಲು ಅವಕಾಶ ಕೊಡದೇ ಆದಷ್ಟು ಅನುಭವಿಸಿ ಆ ಬಳಿಕವೇ ಮದ್ವೆಯಾಗುವ ಯೋಚನೆ ಮಾಡಿ.