ಉಡುಪಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪವರ್ ಸಂಸ್ಥೆಯ ವಾರ್ಷಿಕೋತ್ಸವ ‘ಎಂಪವರ್’ ಹಾಗೂ ಪದಗ್ರಹಣ ಸಮಾರಂಭ ಇದೇ 9ರಂದು ಸಂಜೆ 5.30ಕ್ಕೆ ಕರಾವಳಿ ಜಂಕ್ಷನ್ ಬಳಿಯ ಲಿಗಾಡೋ ಹೋಟೆಲ್‌ನ ಗ್ರಾಂಡ್ ಮಿಲ್ಲೆನಿಯಂ ಹಾಲ್‌ನಲ್ಲಿ ನಡೆಯಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ಶೃತಿ ಜಿ. ಶೆಣೈ ಮಾತನಾಡಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಮಹಿಳಾ ಉದ್ಯಮಿ ರೇವತಿ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಇದೇ ವೇಳೆ ಸಂಸ್ಥೆಯ 2020–21ನೇ ಸಾಲಿನ ಪದಗ್ರಹಣ ನಡೆಯಲಿದ್ದು, ಅಧ್ಯಕ್ಷರಾಗಿ ಪುಷ್ಪಾ ಜಿ. ರಾವ್, ಕಾರ್ಯದರ್ಶಿಯಾಗಿ ಸುವರ್ಶಾ ಮಿನ್ಜ್, ಕೋಶಾಧಿಕಾರಿಯಾಗಿ ಸುಗುಣಾ ಎಸ್. ಸುವರ್ಣ, ಉಪಾಧ್ಯಕ್ಷೆಯಾಗಿ ತಾರಾ ತಿಮ್ಮಯ್ಯ, ಜಂಟಿ ಕಾರ್ಯದರ್ಶಿಯಾಗಿ ಸವಿತಾ ತೋಲಾರ್ ಪದಗ್ರಹಣ ಮಾಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕಿ ರೇಣು ಜಯರಾಮ್, ಪುಷ್ಪಾ ಜಿ. ರಾವ್, ಸುವರ್ಶಾ ಮಿನ್ಜ್, ಸುಗುಣಾ ಎಸ್. ಸುವರ್ಣ ಉಪಸ್ಥಿತರಿದ್ದರು.