ಕೋಟೇಶ್ವರ: ಯುವ ಮೆರಿಡಿಯನ್ ಗ್ರೂಪ್ ನ ಆಧುನಿಕ ಅಮ್ಯೂಸ್ ಮೆಂಟ್ ಪಾರ್ಕ್ ಅನ್ನು ಮಾ.7ರಂದು ಕೋಟೇಶ್ವರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಮಾ.7 ರಂದು ಸಂಜೆ 4:30 ರಿಂದ ನಡೆಯುವ ಸಮಾರಂಭದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ದೀಪಿಕಾದಾಸ್, ವಾಸುಕಿ ವೈಭವ್, ಭೂಮಿ ಶೆಟ್ಟಿ, ಅನೀಶ್ ಶೆಟ್ಟಿ, ಭಾಗವಹಿಸಲಿದ್ದು, ಗಣೇಶ್ ಕುದ್ರೋಳಿ ಅವರಿಂದ ಜಾದೂ ಪ್ರದರ್ಶನ ಜರಗಲಿದೆ.
ಗಮನಸೆಳೆಯುವ ಆತಿಥ್ಯ:
ಯುವ ಮೆರಿಡಿಯನ್ ಗ್ರೂಪ್ ಈಗಾಗಲೇ ಪ್ರವಾಸಿಗರಿಗೆ ಅದ್ಬುತ ಸೇವೆ ನೀಡುತ್ತಿದ್ದು ವಿದೇಶದ ಪ್ರವಾಸಿಗರನ್ನೂ ಸೆಳೆಯುತ್ತಿದೆ.ಯುವ ಮೇರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾ ಹೋಟೆಲ್ ಆಥಿತ್ಯ, ಕರಾವಳಿ ತೀರಗಳ ದರ್ಶನ, ವಿಶ್ವದರ್ಜೆಯ ವಸತಿ ಗೃಹದಿಂದಾಗಿ ಜನಪ್ರಿಯತೆ ಪಡೆದುಕೊಂಡಿದೆ.
ಏನಿದೆ ವಿಶೇಷ?
ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್, ಮೇರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾ, ಮಿನಾಲ್, ಓಪೆರಾ ಪಾರ್ಕ್, ರಾಯಲ್ ಫಾಮ್, ಮೀಟಿಂಗ್ ಹಾಲ್, ಸೆನೆಟ್, ಫೂಲ್ ಡೆಕ್, ಬೋರ್ಡ್ ರೂಂ, ಪ್ರವಾಸಿಗರಿಗೆ ಕುಂದಾಪುರ ಸುತ್ತಮುತ್ತಲಿನ ಅತ್ಯುತ್ತಮ ಬೀಚ್, ಪ್ರಾಚೀನ ದೇಗುಲಗಳ ದರ್ಶನ ಮಾಡಿಸುತ್ತಿದೆ. ನೀರಿನ ಮೇಲಿನ ಸವಾರಿ, ಲ್ಯಾಂಡ್ ರೈಡ್ ನಂತಹ ವಿಶೇಷ ಅವಕಾಶ ಇಲ್ಲಿವೆ. ಮಕ್ಕಳಿಗೆ ಇಷ್ಟವಾಗುವ ಅನೇಕ ಬಗೆಯ ಸವಾರಿಗಳು, ಸನ್ ಮೂನ್ ರೈಡ್, ಫ್ರಾಗ್ ರೈಡ್, ಮಿನಿ ಟೈನ್ ಸೌಲಭ್ಯಗಳು ಇಲ್ಲಿವೆ. ರೋಮಾಂಚಕ ನೀರಿನ ಸ್ಲೈಡ್, ಫ್ಲಾಟ್ ಸೈಡ್ ರೆಸ್ಟೋರೆಂಟ್, ಪ್ಲೇ ಏರಿಯಾ, ಲಾಕರ್ ರೂಮ್, ಸ್ಪೈರಲ್ ಸ್ಲೈಡ್, ಕೆಫೆ, ರೈನ್ ಶವರ್, ಬೇಬಿಪೂಲ್, ಶವರ್, ಕಾಫಿ ಶಾಪ್, ಔಟ್ ಡೋರ್ ಜಿಮ್, ಚಿಲ್ಡ್ರನ್ ಪ್ಲೇ ರೂಮ್, ಜಾಲಿ ರೈಡ್, ಸ್ಮಾಲ್ ಜಾಯಿಂಟ್ ವೀಲ್ ಹೀಗೆ ನಾನಾ ಸೌಕರ್ಯಗಳನ್ನು ಒಳಗೊಂಡಿದೆ.
ಎಂದು ಸಂಸ್ಥೆಯ ಪಾಲುದಾರರು ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.