ಮಂಗಳೂರು: ಆಲ್ ಇಂಡಿಯಾ ಯೋಗ ಸೊಸೈಟಿ ಮತ್ತು ಪತಂಜಲಿ ಯೋಗ ಯುವ ಭಾರತ್ ವತಿಯಿಂದ ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಬರುವ ಮಾ.15ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆ ಆಯೋಜಿಸಲಾಗಿದೆ.
ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಕಿರಿಯರ ವಿಭಾಗ – 9ರಿಂದ 14 ವರ್ಷ, ಹಿರಿಯರ ವಿಭಾಗ – 15ರಿಂದ 25 ವರ್ಷ. ಅರ್ಜಿ ಸಲ್ಲಿಸಲು ಮಾ.10 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಮೊ: 94483 44355, 99800 51727 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.












