ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದುರ್ಗಾಪರಮೇಶ್ವರೀ ದೇವಿಗೆ ಸೇವಾ ರೂಪದಲ್ಲಿ ನೀಡಲಿರುವ ನೂತನ ರಜತ (ಬೆಳ್ಳಿ) ರಥದ ಪುರ ಪ್ರವೇಶ ಮಾ.27 ರಂದು ಹಾಗೂ ಲೋಕಾರ್ಪಣೆಯು ಮಾ.28 ರಂದು ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಪೇಜಾವರ ಅಧೋಕ್ಷಜಮಠ ಉಡುಪಿ ಇವರಿಂದ ನಡೆಯಲಿದೆ. ಹಾಗೂ ಆಶೀರ್ವಚನ ಮತ್ತು ದಾನಿಗಳಿಗೆ ಸನ್ಮಾನವು ಕಾರ್ಯಕ್ರಮ ನಡೆಯಲಿದೆ.
ಮಾ.28 ಮಂಗಳವಾರದಂದು ರಾತ್ರಿ ಗಂಟೆ 8.00 ರಿಂದ ರಂಗ ಪೂಜೆ ಹಾಗೂ ಪ್ರಥಮ ರಥೋತ್ಸವ ನಡೆಯಲಿರುವುದು.