ಮಾ.21 ರಂದು ಮೂಡ್ಲಕಟ್ಟೆಯಲ್ಲಿ ಯಕ್ಷಗಾನ ಕಲಾವಿದರಿಗೆ ಯಕ್ಷ ಕುಸುಮ ಪ್ರಶಸ್ತಿ ಕಾರ್ಯಕ್ರಮ

ಕುಂದಾಪುರ:  ಕಾಡಿನಕೊಂಡ ಮೂಡ್ಲಕಟ್ಟೆಯಲ್ಲಿ ದಿನಕರ ಮತ್ತು ರಾಜಶ್ರೀ ಬಳ್ಕೂರು ಇವರ ಮನೆಯ ನೂತನಗೃಹ ಪ್ರವೇಶದ ಪ್ರಯುಕ್ತ  ಮಾ.21 ರಂದು ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳ ಮಾರಣಕಟ್ಟೆ ಇವರಿಂದ’ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ’ಎಂಬ ಯಕ್ಷಗಾನ ನಡೆಯಲಿದೆ.
ಇದೇ ಸಂದರ್ಭ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೌಕೂರು ವಾದ್ಯವಾದಕ  ಗೋಪಾಲ ದೇವಾಡಿಗ ಮತ್ತು ಮಾರಣ ಕಟ್ಟೆಮೇಳದ ಹಿರಿಯ ಕಲಾವಿದರಾದ  ಕೊಳಾಳಿ ಕೃಷ್ಣ ಶೆಟ್ಟಿ, ನಂದೀಶ್ ಮೊಗವೀರಜನ್ನಾಡಿ, ಮೇಳದ ನೇಪಥ್ಯ ಕಲಾವಿದರಾದ ಮೊಳಳ್ಳಿ   ರಮೇಶ ಮರಾಠ, ಗೋಳಿಹೊಳೆ ರಾಮ ನಾಯ್ಕಇವರನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಬಿ.ಅಪ್ಪಣ್ಣ ಹೆಗ್ಡೆ ಅವರು’ಕಲಾವಿದರಿಗೆ ಯಕ್ಷ ಕುಸುಮ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ ಎಂದು ಬಳ್ಕೂರು ಪ್ರತಿಷ್ಠಾನದ ಅಧ್ಯಕ್ಷ ಕರುಣಾಕರ ಬಳ್ಕೂರು  ತಿಳಿಸಿದ್ದಾರೆ.