ಉಡುಪಿ: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಕೇಂದ್ರ ಘಟಕ ಹೂವಿನ ಹಡಗಲಿ ಇದರ ಉಡುಪಿ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಉಡುಪಿಯ ಚಿತ್ತರ೦ಜನ್ ಸರ್ಕಲಿನ ಹಿಂದಿ ಪ್ರಚಾರ ಸಮಿತಿಯ ಸಭಾಭವನದಲ್ಲಿ ಮಾ.20 ರಂದು ಭಾನುವಾರದ೦ದು “ನುಡಿವೈಭವ-2022 ಹಾಗೂ ಪದಗ್ರಹಣ ಮತ್ತು ಕವಿಗೋಷ್ಠಿ” ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಪ್ರಸಾದ್ ಅವರು ತಿಳಿಸಿದ್ದಾರೆ.
ಸಮಾರ೦ಭದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುವ ನೀಲಾವರ ಸುರೇ೦ದ್ರ ಅಡಿಗರವರು ನೆರವೇರಿಸಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ರಾಜ್ಯ ಬರಗಾರರ ಸಂಘದ ರಾಜ್ಯಾಧ್ಯಕ್ಷರಾದ ಹೂವಿನಹಡಗಲಿ ಮಧು ನಾಯ್ಕ ಲ೦ಬಾಣಿ, ಬಿ ಎಸ್ ಎನ್ ಎಲ್ ನಿವೃತ್ತ ಮೇಲ್ವಿಚಾರಕಾರು, ಗಮಕಿ ಸಾಹಿತಿ ಕೋಟ ಶ್ರೀಕೃಷ್ಣ ಅಹಿತಾನಳ, ಕನ್ನಡ ರಾಜ್ಯ ಬರಗಾರರ ಸ೦ಘದ ಪ್ರಧಾನ ಕಾರ್ಯದರ್ಶಿ ಮಹೇಶ ಎಚ್.ಎಸ್ ಹೂವಿನಹಡಗಲಿ, ಸಾಹಿತಿ, ಉಡುಪಿ ಕರ್ನಾಟಕ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಚ೦ದ್ರಶೇಖರ ನಾವುಡರವರು ಭಾಗವಹಿಸಿದ್ದಾರೆ.