ಬೆಂಗಳೂರು: ಋತುವಿನ ಮೊದಲ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಪೂರ್ವ ಕರಾವಳಿಯ ತಮಿಳುನಾಡು, ಪುದುಚೇರಿ, ಮತ್ತು ಆಂಧ್ರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸೈಕ್ಲೋನ್ ಪರಿಣಾಮಗಳನ್ನು ಎದುರಿಸಲು ಆಡಳಿತವು ಸರ್ವ ಸನ್ನದ್ದವಾಗಿದೆ.
ಮ್ಯಾನ್-ಡೌಸ್ ಎಂದು ಕರೆಯಲಾಗುವ ಈ ಸೈಕ್ಲೋನ್ ಗೆ ಅರೇಬಿಕ್ ಭಾಷೆಯಲ್ಲಿ ‘ನಿಧಿ ಪೆಟ್ಟಿಗೆ’ ಎನ್ನುವ ಅರ್ಥವಿದೆ. ಈ ಸೈಕ್ಲೋನ್ ನ ಪರಿಣಾಮ ಕರ್ನಾಟಕದ ಬೆಂಗಳೂರಿನಲ್ಲಿಯೂ ಕಾಣಿಸಿಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 9 ರ ಮಧ್ಯರಾತ್ರಿ ವೇಳೆಗೆ ಈ ಸೈಕ್ಲೋನ್ ಗಂಟೆಗೆ 85 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಸೈಕ್ಲೋನ್ ಕಾರಣದಿಂದಾಗಿ ಡಿ.12 ಮತ್ತು 13 ರಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಕರ್ನಾಟಕದ ಹಲವೆಡೆ ತುಂತುರುನಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡಿಸೆಂಬರ್ 13 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.