ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶ್ರೀ ಮನೋಹರ್ ಕಲ್ಮಾಡಿ, ಶ್ರೀನಿಧಿ, ಪಂದುಬೆಟ್ಟು ಅವರನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ರ ಕಲಂ3(3) (ಎ.ಎಲ್.ಎಂ.) ರನ್ವಯ ಹಾಗೂ ನಿಯಮ 3(4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರ ಮಾ10 ರಂದು ನೇಮಕ ಮಾಡಿ ಆದೇಶಿಸಿದೆ.
ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಅಂಬಲಪಾಡಿ, ಶ್ರೀ ಕಿಶೋರ್ ಕುಮಾರ್ ಕುಂಜಿಬೆಟ್ಟು, ಶ್ರೀಮತಿ ಸುಮ ನಾಯಕ್ ಕುಂಜಿಬೆಟ್ಟು, ಶ್ರೀಮತಿ ಮಾಲತಿ ಸುಧಾಕರ್ ಹೂಡೆ, ಶ್ರೀ ಯೋಗೀಶ್ ಚಂದ್ರ ಅಂಬಲಪಾಡಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶಾಸಕ ಕೆ. ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.