ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಕನ್ನಡದ ಮೇರು ಕೃತಿ. ಅದರ ಒಂದೊಂದು ಕಗ್ಗವೂ ಬಾಳಿಗೆ ಜ್ಞಾನ ಬೆಳಕು. ಕತ್ತಲನ್ನು ತೊಲಗಿಸಿ ಬೆಳಕಿನ ಕಿಡಿಗಳನ್ನು ಹೊಮ್ಮಿಸೋ ಮಾಧುರ್ಯ ಆ ಕಗ್ಗಗಳಿಗಿವೆ.ಈ ಕಗ್ಗಗಳನ್ನು ಎಲ್ಲರಿಗೂ ತಲುಪಿಸಬೇಕು, ಸಾಮಾನ್ಯ ಜನರಿಗೆ ಇದೊಂದು ಸ್ಪೂರ್ತಿಯಾಗಬೇಕು ಎನ್ನುವ ಉದ್ದೇಶದಿಂದ ಎಕ್ಸ್ ಪರ್ಟ್ ಕಾಲೇಜು ಮಂಗಳೂರು ಇಲ್ಲಿನ ಕನ್ನಡ ಉಪನ್ಯಾಸಕರಾದ ಕರುಣಾಕರ ಬಳ್ಕೂರ್ ಅವರು ಡಿಜಿವಿ ಅವರ ಮಂಕುತಿಮ್ಮನ ಕಗ್ಗದ ವಾಚನ ಮತ್ತು ವ್ಯಾಖ್ಯಾನ ಮಾಲಿಕೆಗಳನ್ನು ಯುಟ್ಯೂಬ್ ಜಾಲತಾಣದಲ್ಲಿ ಕಾವ್ಯಾಸಕ್ತರಿಗೆ ತಲುಪಿಸಿದ್ದಾರೆ.
ಕಗ್ಗವನ್ನು ಸುಂದರವಾಗಿ ವಾಚಿಸುತ್ತ, ಅದರ ಹೂರಣವನ್ನು ಮನತಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಕಗ್ಗ ಅರ್ಥವಾಗಲ್ಲ, ಯಾರಾದರೂ ಅದರ ತಾತ್ಪರ್ಯವನ್ನು ಸರಳವಾಗಿ ಹೇಳಿದರೆ ಚೆನ್ನಾಗಿತ್ತು ಎನ್ನುವವರಿಗೆ ಬಳ್ಕೂರರ ಈ ಮಾಲಿಕೆ ದಾರಿಯಾಗುತ್ತದೆ.ಅವರ ಕೆಲವು ಮಾಲಿಕೆಗಳ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ.ಆಸಕ್ತರು ಕಗ್ಗಗಳಿಗೆ ಕವಿಯಾಗಿ