ಮಾ.8 ರಂದು ಸುರತ್ಕಲ್‌ನಲ್ಲಿ ಮಂಜುನಾಥ ಐ ಕೇರ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ


ಉಡುಪಿ:ಸುರತ್ಕಲ್ ಸಮೀಪದ ಇಡ್ಡ್ಯದಲ್ಲಿರುವ ಗೋವಿಂದ ದಾಸ ಕಾಲೇಜಿನ ಎದುರು ಭಾಗದಲ್ಲಿ “ಮಂಜುನಾಥ ಐ ಕೇರ್ ಸೂಪರ್ ಸ್ಪೆಷಾಲಿಟಿ ಐ ಸೆಂಟರ್” ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ಮಾರ್ಚ್ 8, ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮಕ್ಕೆ ಮಂಗಳೂರು ನಾರ್ತ್ ನ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರೀಶ್ ಆಚಾರ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಇಂಡಿಯಾನಾ ಆಸ್ಪತ್ರೆಯ MD, ಹಾಗೂ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಸ್ಥಾಪಕರಾದ ಡಾ. ಯೂಸುಫ್ ಎ. ಕುಂಬ್ಳೆ ಹಾಗೂ ಡಾ. ಸುನಿಲ್ ಕುಮಾರ್ ಪ್ರೊಫೆಸರ್ ಜನರಲ್ ಮೆಡಿಸಿನ್, ಅಧ್ಯಕ್ಷರು ಐಎಂಎ ಸುರತ್ಕಲ್ ಇವರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಡಾ. ಸಚಿನ್ ರಾಜ್‌ಕುಮಾರ್, ಡಾ. ಶಕೀಲಾ ಸಚಿನ್, ಡಾ. ಶ್ರುತಿ ಕೆ ಮತ್ತು ಡಾ. ಅನ್ವಥಾ ಶೆಟ್ಟಿ ಉಪಸ್ಥಿತಲಿರಲಿದ್ದಾರೆ.