ಉಡುಪಿ: ಅಧಿಕಾರಕ್ಕಾಗಿ ನಾನು ಈ ಹಿಂದೆಯೂ ಯಾವುದೇ ಲಾಭಿ ಮಾಡಿದವನಲ್ಲ ಹಾಗೂ ಇನ್ನು ಮುಂದೆಯೂ ಯಾವುದೇ ಲಾಭಿ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು, ಅಧಿಕಾರ ಬಂದಾಗ ಹಿಗ್ಗದೇ ಅಧಿಕಾರ ಇಲ್ಲದಿದ್ದಾಗ ಕುಗ್ಗದೇ ನಡೆದುಕೊಂಡು ಬಂದಿದ್ದೇನೆ. ಹೀಗಾಗಿ ಸಚಿವ ಸ್ಥಾನದ ಬಗ್ಗೆ ಲಾಭಿ ಮಾಡುವ ಪ್ರಮೇಯ ಬರುವುದಿಲ್ಲ ಎಂದು ವಿನಯರ್ಪೂರ್ವಕವಾಗಿ ಉತ್ತರಿಸಿದರು.