HomeTrendingಮಣಿಪಾಲ: ಯುವತಿ ನಾಪತ್ತೆ

ಮಣಿಪಾಲ: ಯುವತಿ ನಾಪತ್ತೆ

ಮಣಿಪಾಲ: ಮಣಿಪಾಲ ಶಿವಳ್ಳಿ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಣಿಪಾಲ ಶಿವಳ್ಳಿ ಗ್ರಾಮದ ನಿಶಾ ಡಿ. ಎಸ್ (21) ಕಾಣೆಯಾಗಿದ್ದು, ಈಕೆ ಅ. 11ರ ರಾತ್ರಿ 7.50ರ ವೇಳೆಗೆ ಉಡುಪಿ ಪಿಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದಳು. ಆದರೆ ನಿಶಾ ಪಿಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!