ಮಣಿಪಾಲ: ಅಂಗಾಂಗದಾನ, ಚರ್ಮದಾನ ಮತ್ತು HPV ಚುಚ್ಚುಮದ್ದು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲದಲ್ಲಿ ವಾಕಥಾನ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ರೋಟರಿ ಜಿಲ್ಲೆ 3182, ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಕಸ್ತೂರ್ಬ ಆಸ್ಪತ್ರೆ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದರು.
ಕೆಎಂಸಿ ಕಾಲೇಜು ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಅಧ್ಯಕ್ಷ ಡಾ. ದೀಪಕ್ ರಾಮ್ ಬಾಯಿರಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರೋ. ಪಾಲಾಕ್ಷ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರೋ. ಸೌಮ್ಯ ಮಣಿ (ಜಿಲ್ಲಾ ಸಂಯೋಜಕಿ – ಪಬ್ಲಿಕ್ ಇಮೇಜ್), ಡಾ. ಜೋಸೆಫ್ ತೋಮಸ್ (ಚರ್ಮ ವಿಭಾಗದ ಮುಖ್ಯಸ್ಥರು, ಕೆಎಂಸಿ), ರೋ. ಬಿ.ಎಂ. ಭಟ್, ರೋ. ಅಮಿತ್ ಅರವಿಂದ್ (ಸಹಾಯಕ ಗವರ್ನರ್, Zone 4), ರೋ. ಡಾ. ಶ್ರೀಧರ್ ಡಿ (ವಲಯ ಸೇನಾನಿ, Zone 4), ರೋ. ರೇಖಾ ಹಾಗೂ ರೋ. ಮೋಹನ್ ನಾಯಕ್ ಭಾಗವಹಿಸಿದ್ದರು.
ಸುಮಾರು 250ಕ್ಕೂ ಹೆಚ್ಚು ಜನರು ಪಾಲ್ಗೊಂಡ ಈ ಕಾಲ್ನಡಿಗೆ ಜಾಥಾ, MIT ಮಣಿಪಾಲದಿಂದ ಆರಂಭವಾಗಿ ಟೈಗರ್ ಸರ್ಕಲ್ ಮತ್ತು ಸಿಂಡಿಕೇಟ್ ಸರ್ಕಲ್ ಮೂಲಕ ಕೆಎಂಸಿ ಆವರಣದಲ್ಲಿ ಕೊನೆಗೊಂಡಿತು.
ಕಾರ್ಯಕ್ರಮದ ನಿರ್ವಹಣೆಯನ್ನು ರೋ. ನಿತ್ಯಾನಂದ ನಾಯಕ್ ನರಸಿಂಗೆ ಸಂಯೋಜಿಸಿದರು.












