ಉಡುಪಿ:ಸಿಟಿ ಬಸ್ಸುಗಳಿಗೆ ಬಾಗಿಲು ಸುರಕ್ಷತೆಯೇ ಅಥವಾ ಸಮಸ್ಯೆಯೇ?-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಸಿಟಿ ಬಸ್ಸುಗಳಿಗೆ ಬಾಗಿಲು ಬೇಕೇ? ಬೇಡವೇ?ಉಡುಪಿ ಸಿಟಿ ಬಸ್ಸುಗಳಲ್ಲಿ ಹತ್ತಿ ಇಳಿಯುವ ಗಡಿ ಬಿಡಿಯ ಪರಿಸ್ಥಿತಿ ನೇೂಡಿದರೆ ಈ ಬಾಗಿಲುಗಳು ಪ್ರಯಾಣಿಕರಿಗೆ ಕಂಡಕ್ಟರ್ ಗಳಿಗೆ ಸ್ವಲ್ಪ ಕಿರಿ ಕಿರಿ ಮಾಡ ಬಹುದು ಅನ್ನಿಸುತ್ತದೆ .ಪ್ರಯಾಣಿಕರ ಜೀವ ರಕ್ಷಣಾ ದೃಷ್ಟಿಯಿಂದ ಬೇಕು ಅನ್ನುವ ಅಭಿಪ್ರಾಯವೂ ಸರಿ.

ಆದರೆ ಉಡುಪಿಯಲ್ಲಿನ ಸಿಟಿ ಬಸ್ಸುಗಳು ಹೆಜ್ಜೆ ಹೆಜ್ಜೆಗೂ ನಿಲುಗಡೆ ಮಾಡಬೇಕಾದ ಸಂದರ್ಭದಲ್ಲಿ ಈ ಬಾಗಿಲು ಹಾಕಿ ತೆಗೆಯುವವರು ಯಾರು.?ಕಂಡಕ್ಟರ್ ಮಾಡ ಬೇಕಾ?ಪ್ರಯಾಣಿಕರೆ ಮಾಡ ಬೇಕಾ? ಅಥವಾ ಚಾಲಕರ ನಿಯಂತ್ರಣ ಸ್ವಯಂ ತೆರೆದು ಮುಚ್ಚುವ ಬಾಗಿಲುಗಳು ಅಳವಡಿಕೆಯ ಅನ್ನುವ ಪ್ರಶ್ನೆ ? ಅಂತೂ ನನ್ನ ಅನುಭವದ ಪ್ರಕಾರ ಉಡುಪಿ ಮಣಿಪಾಲ್ ನಡುವೆ ತಿರುಗಾಡುವ ಬಸ್ಸುಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಸ್ವಲ್ಪ ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುತ್ತದೆ.ಉಳಿದ ಸಮಯದಲ್ಲಿ ಕುಳಿತುಕೊಂಡು ಹೇೂಗುವಷ್ಟೆ ಪ್ರಯಾಣಿಕರಿರುತ್ತಾರೆ.ಹಾಗಾಗಿ ಇಲ್ಲಿ ಬಾಗಿಲಿನ ಅವಶ್ಯಕತೆ ತೀರ ಕಡಿಮೆ.ಅದೇ ಗ್ರಾಮೀಣ ಪ್ರದೇಶದಲ್ಲಿ ತಿರುಗುವ ಬಸ್ಸುಗಳಿಗೆ ಬಾಗಿಲುಗಳ ಅಗತ್ಯವಿದೆ ಅನ್ನುವುದು ಸತ್ಯ.

https://www.instagram.com/reel/DT2dB0ZETR8/?igsh=MW84bHhsb25mcmV6OQ==

ಉಡುಪಿ ಮಣಿಪಾಲ್ ನಡುವೆ ಸಂಚರಿಸುವ ಬಸ್ಸುಗಳಲ್ಲಿ ಪ್ರಯಾಣಿಕರು ಬಸ್ಲಿನ ಒಳಗೆ ಅಥವಾ ಇಳಿಯುವಾಗ ನೆಲಕ್ಕೆ ಕಾಲಿಡುವ ಮೊದಲೇ “ರೈಟ್ ಪೇೂಯಿ”ಅನ್ನುವ ಕಂಡಕ್ಟರ್ ಗಳೇ ಜಾಸ್ತಿ.ಈ ಗಡಿಬಿಡಿಯ ಸಂದರ್ಭದಲ್ಲಿ ಬಸ್ಸುಗಳ ಬಾಗಿಲುಗಳ ನಡುವೆ ಸಿಕ್ಕಿಕೊಂಡು ಬಿದ್ದು ಅಪಘಾತವಾದರೂ ಆಶ್ಚರ್ಯ ಪಡ ಬೇಕಾಗಿಲ್ಲ..ಹಾಗಾಗಿ ಸಿಟಿ ಬಸ್ಸುಗಳಿಗೆ ಬಾಗಿಲು ಬೇಕೇ? ಬೇಡವೇ? ಅನ್ನುವುದನ್ನು ತುಂಬಾ ಗಂಭೀರವಾಗಿ ಮರು ಆಲೇೂಚನೆ ಮಾಡಬೇಕಾಗಿದೆ ಅನ್ನಿಸುತ್ತದೆ ಎಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ಅಭಿಪ್ರಾಯ ಪಟ್ಟಿದ್ದಾರೆ.