ಮಣಿಪಾಲ: ಬಾಲಕ ನಾಪತ್ತೆ

ಉಡುಪಿ: ಮಣಿಪಾಲ ಪ್ರಗತಿನಗರದ ಮಂಚಿ ನಿವಾಸಿ ಅಭಿಷೇಕ್ (17) ಎಂಬ ಬಾಲಕನು ಅಕ್ಟೋಬರ್ 15 ರಂದು ಸಂಜೆ 4 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 7 ಇಂಚು ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಠಾಣೆ ದೂ.ಸಂಖ್ಯೆ: 0820-2570328, ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೂ.ಸಂಖ್ಯೆ: 9480805448, ಮಣಿಪಾಲ ಪಿ.ಎಸ್.ಐ ಮೊ.ನಂ: 9480805475 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.