ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್; ವಿದ್ಯಾರ್ಥಿ ಶಿಕ್ಷಕಿಯರಿಗೆ ಡಿಪ್ಲೋಮೋ ಪ್ರಮಾಣ ಪತ್ರ ವಿತರಣೆ 

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲದ- ಮಾಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್ (D-Med) ಶಿಕ್ಷಕಿಯರಿಗೆ 2021-22 ಸಾಲಿನ ವಿದ್ಯಾರ್ಥಿ ಶಿಕ್ಷಕಿಯರಿಗೆ ಡಿಪ್ಲೋಮೋ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಶಿಕ್ಷಕಿಯರಿಗೆ ಪುರಸ್ಕಾರ ಸಮಾರಂಭವು ಕ್ರಿಸ್ಟಲ್ ಬಿಜ್ಹ್ ಹಬ್‍ನಲ್ಲಿ ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಧವಕೃಪಾ ಶಾಲೆಯ ನಿವೃತ್ತ ಪ್ರಾಂಶುಪಾಲೆ, ಶ್ರೀಮತಿ ಶಶಿಕಲಾ ರಾಜವರ್ಮ ಮಾತನಾಡಿ ಸಮಾಜದಲ್ಲಿ ಶಿಕ್ಷಕಿಯ ಮುಖ್ಯಪಾತ್ರ ಮತ್ತು ಅವರಿಗೆ ಸಿಗುವಂತಹ ಅವಕಾಶ ಹಾಗೂ ಜವಾಬ್ದಾರಿಯ ನಿರ್ವಹಣೆಯನ್ನು ಸೂಕ್ತ ಉದಾಹರಣೆಯೊಂದಿಗೆ ವಿವರಿಸಿದರು. ಇನ್ನೋರ್ವ ಅತಿಥಿ ಶ್ರೀ ವಿಶ್ವನಾಥ ಕಾಮತ್‍ರವರು ಮಾತನಾಡಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿದರೂ, ಪೂರ್ವಪ್ರಾಥಮಿಕ ಶಿಕ್ಷಕಿಯರನ್ನು ಜೀವನದ ಕೊನೆಯವರೆಗೆ ನೆನಪಿಸಿಕೊಳ್ಳುತ್ತಾರೆ ಹಾಗೂ ಶಿಕ್ಷಕಿಯರ ಮಾತುಗಳು ಮಕ್ಕಳಿಗೆ ವೇದವಾಕ್ಯ ಎಂದು ಹೇಳಿದರು.

2021-22ರ ಸಾಲಿನ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಶೇ.100 ಪ್ರತಿಶತ ಉದ್ಯೋಗ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದ ಈ ಸಂಸ್ಥೆಗೆ ಅತಿಥಿಗಳು ಪ್ರಶಂಸೆಯನ್ನು ಹಾಗೂ ವಿದ್ಯಾರ್ಥಿನಿಯರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಪ್ರಾಂಶುಪಾಲೆ ಶ್ರೀಮತಿ ಸುನೀತಾ ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿ ಉದ್ಯೋಗ ಕಲ್ಪಿಸುವ ಪ್ರಯತ್ನ ಪಡುವುದಾಗಿ ಈ ದಶಮಾನೋತ್ಸವದ ಸಂದರ್ಭ ತಿಳಿಸಿದರು. ಇನ್ನೋರ್ವ ಅತಿಥಿ ಶ್ರೀ ವಿವೇಕ ಕಾಮತ್‍ ರವರು ಶಿಕ್ಷಕಿಯರು ಉತ್ತಮ ಮಾರ್ಗದರ್ಶಿಗಳಬೇಕೆಂದು ಹೇಳಿದರು.

2021-22ನೇ ಸಾಲಿನ DMEd ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪೂಜಾ ಮತ್ತು ಮೋನಿಷಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪನ್ಯಾಸಕಿ ಶ್ರೀಮತಿ ದಿವ್ಯಾ ಕೋಟ್ಯನ್‍ ರವರು ಕಾರ್ಯಕ್ರಮದ ವಂದನಾರ್ಪಣೆಗೈದರು ಹಾಗೂ ಶ್ರೀಮತಿ ಜಸ್ಸಿಂತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಕೆಲವೇ ಸೀಟುಗಳು ಲಭ್ಯವಿದ್ದು, ಆಸಕ್ತಿಯಿರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವ ಸಂಸ್ಥೆಯ ಸಂಯೋಜಕಿ ಸುನೀತಾ ಅವರನ್ನು ಸಂಪರ್ಕಿಸುವಂತೆ (9901722527)ತಿಳಿಸಿರುತ್ತಾರೆ.