ಮಣಿಪಾಲ: ರೋಟರಿ ಕ್ಲಬ್–ಮಣಿಪಾಲ, ರೋಟರಿ ಕ್ಲಬ್–ಮಣಿಪಾಲ ಟೌನ್ ಮತ್ತು ಐಎಫ್‌ಎಂಆರ್ (IFMR) ಉಡುಪಿ ಘಟಕದ ಸಂಯುಕ್ತ ಆಶ್ರಯದಲ್ಲಿ ಒಂದು ವಿಶೇಷ ಜಂಟಿ ಸಭೆಯು ನವೆಂಬರ್ 6ರಂದು ಬೆಳಗ್ಗೆ 8.00 ಗಂಟೆಗೆ ಮಣಿಪಾಲದ ಅನಂತ್ ನಗರದಲ್ಲಿರುವ ರೋಟರಿ ಸೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಈ ಸಭೆಯಲ್ಲಿ “ರೋಟರಿ K2K IFMR ಇಂಡಿಯಾ ರ್ಯಾಲಿ” ತಂಡದ ಸಾಹಸಮಯ ಯಾತ್ರಿಕರು ಭಾಗವಹಿಸಲಿದ್ದಾರೆ.
ಈ ಬೃಹತ್ ಬೈಕ್ ರ‍್ಯಾಲಿಯು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ” ಉತ್ತಮ ಪ್ರಕೃತಿ ಮತ್ತು ಆರೋಗ್ಯದಿಂದ ಶಾಂತಿ” ಎಂಬ ಸಂದೇಶವನ್ನು ಸಾರುತ್ತಾ ಸಾಗುತ್ತಿದೆ.
26 ಮಂದಿ ರೋಟರಿ ಬೈಕರ್‌ಗಳು 17 ದಿನಗಳಲ್ಲಿ 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 50 ನಗರಗಳಲ್ಲಿ, 43 ರೋಟರಿ ಜಿಲ್ಲೆಗಳನ್ನು ಸಂಪರ್ಕಿಸಿ,14,000 ಕಿ.ಮೀ. ದೂರ ಸಾಗಿ ಯಾತ್ರೆ ನಿರ್ವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3182ರ ಜಿಲ್ಲಾ ಗವರ್ನರ್ – ರೋಟೇರಿಯನ್ ಪಾಲಾಕ್ಷ ಕೆ., ವಲಯ 4ರ ಅಸಿಸ್ಟೆಂಟ್ ಗವರ್ನರ್ – ರೋಟೇರಿಯನ್ ಅಮಿತ್ ಅರವಿಂದ್, ಐಎಫ್‌ಎಂಆರ್ ಇಂಡಿಯಾದ ಪೂರ್ವಾಧ್ಯಕ್ಷ – ರೋಟೇರಿಯನ್ ಅಜಿತ್ ಎಸ್. ರಾಮ್ ಹಾಗೂ ರೋಟರಿ ಕ್ಲಬ್–ಮಣಿಪಾಲ, ಮಣಿಪಾಲ ಟೌನ್ ಹಾಗೂ ಐಎಫ್‌ಎಂಆರ್–ಉಡುಪಿ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿರಲಿದ್ದಾರೆ.
















