ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ನ ವಾರ್ಷಿಕೋತ್ಸವ – ಓಪಸ್ ಲೈಟ್- 22.

ಮಣಿಪಾಲ: ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ನ ವಿದ್ಯಾರ್ಥಿ ಪರಿಷತ್ತು, ಎರಡು ವರ್ಷಗಳ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಹಿಂತಿರುಗುತ್ತಿರುವುದನ್ನು ಸಂಭ್ರಮಿಸಲು ತನ್ನ ವಾರ್ಷಿಕೋತ್ಸವ ಓಪಸ್ ಲೈಟ್- 2022 ಆಯೋಜಿಸಿತ್ತು.

ವಾರ್ಷಿಕೋತ್ಸವವನ್ನು ಏಪ್ರಿಲ್ 23 ರ ಶನಿವಾರದಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ 900 ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ನ ನಿರ್ದೇಶಕಿ ಡಾ. ನಂದಿನೇನಿ ರಮಾದೇವಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ವಿಶೇಷ ಆಹ್ವಾನಿತರಾದ ಡಾ.ಗೀತಾ ಮೈಯ್ಯ ಮತ್ತು ಡಾ.ಸೋಮಶೇಖರ ಭಟ್ ಉಪಸ್ಥಿತರಿದ್ದರು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಅಧ್ಯಾಪಕರನ್ನು ಅಭಿನಂದಿಸುವ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಎಲ್ಲಾ ವಿಭಾಗದ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವಣಗೊಳಿಸಲು ಕಾರ್ಯಕ್ರಮವು ವೇದಿಕೆಯಾಯಿತು.