ಫ್ಯಾಷನ್ ಮತ್ತು ಪ್ರತಿಭೆಗೆ ಅದ್ಬುತ ವೇದಿಕೆಯಿದು.
ಕುಂದಾಪುರ: ಫ್ಯಾಷನ್ ಮತ್ತು ಪ್ರತಿಭೆಯ ವೇದಿಕೆ ಆಗಿರುವ ಮಣಿಪಾಲ್ ರನ್ವೇ ಕಾರ್ಯಕ್ರಮದ ಭಾಗವಾಗಿ, “ಲಿಲ್ ಪ್ರಿನ್ಸ್ & ಪ್ರಿನ್ಸೆಸ್ ಕರ್ನಾಟಕ” ಹಾಗೂ “ಮಿಸ್ಟರ್, ಮಿಸ್, ಟೀನ್ & ಮಿಸೆಸ್ ಮಣಿಪಾಲ್ 2025-26” ಸ್ಪರ್ಧೆಗಳಿಗಾಗಿ ಆಡಿಷನ್ಗಳು ಮಾರ್ಚ್ 29ರಂದು ಕುಂದಾಪುರದಲ್ಲಿ ನಡೆಯಲಿವೆ.
ಈ ಕಾರ್ಯಕ್ರಮವು ವಿಶ್ವದ ಅತಿ ದೀರ್ಘ ಫ್ಯಾಷನ್ ಶೋ ಸಾಧನೆಗಾಗಿ ನಡೆಸಲಾಗುತ್ತಿರುವ ಅಧಿಕೃತ ಪ್ರಯತ್ನದ ಭಾಗವಾಗಿದ್ದು, ಆ ಶೋ ಗಳು ಏಪ್ರಿಲ್-ಮೇಯಲ್ಲಿ ಮಣಿಪಾಲ್ನಲ್ಲಿ ನಡೆಯಲಿದೆ.
ಆಡಿಷನ್ಗಳು ಕುಂದಾಪುರದ Oakwood Indian Schoolನಲ್ಲಿ ನಡೆಯಲಿದ್ದು, ಸ್ಥಳದಲ್ಲೇ ನೋಂದಣಿ ಬೆಳಗ್ಗೆ 11.30ರಿಂದ ಆರಂಭವಾಗುತ್ತದೆ. ಟೀನ್, ಮಿಸ್ ಮತ್ತು ಮಿಸೆಸ್ ವಿಭಾಗದ ಸ್ಪರ್ಧಿಗಳು ಹೀಲ್ಸ್ ಧರಿಸಿ ರ್ಯಾಂಪ್ ವಾಕ್ ಮಾಡಲು ಸೂಚಿಸಲಾಗಿದೆ. ಡ್ರೆಸ್ ಕೋಡ್ ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ₹199 ನೋಂದಣಿ ಶುಲ್ಕ ನಿಗದಿಯಾಗಿದೆ. ವಿವಿಧ ಕ್ಷೇತ್ರಗಳ ಹಲವಾರು ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡುತ್ತಿವೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಮತ್ತು ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
















