ಮಣಿಪಾಲ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ: ಅಧ್ಯಕ್ಷರಾಗಿ ಗಣೇಶ್ ಪ್ರಭು, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಿಯಾಜ್ ಪುನರಾಯ್ಕೆ

ಉಡುಪಿ: ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಮಣಿಪಾಲ ಇದರ 2026ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಪ್ರಭು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಿಯಾಜ್ (3ನೇ ಬಾರಿ) ಅವರು ಪುನರಾಯ್ಕೆಯಾಗಿದ್ದಾರೆ.

ಮಣಿಪಾಲ ಈಶ್ವರನಗರದ ವೈಷ್ಣವಿ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಘದ ಗೌರವಾಧ್ಯಕ್ಷರಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಪದಾಧಿಕಾರಿಗಳ ವಿವರ ಹೀಗಿದೆ:ಗೌರವಾಧ್ಯಕ್ಷರಾಗಿ ಉಡುಪಿ ಶಾಸಕ ಯಶ್ವಾಲ್ ಸುವರ್ಣ, ಗೋಪಾಲಕೃಷ್ಣ ಕಾಮತ್ (ಉಪಾಧ್ಯಕ್ಷ), ಲೋಕೇಶ್ ಪೂಜಾರಿ (ಕೋಶಾಧಿಕಾರಿ), ಸುಕೇಶ್ ನಾಯ್ಕ (ಜಂಟಿ ಕಾರ್ಯದರ್ಶಿ), ಗುರುದತ್ ಮಲ್ಯ (ಕ್ರೀಡಾ ಕಾರ್ಯದರ್ಶಿ) ಹಾಗೂ ಸಂದೀಪ್ ಕುಂದರ್ ಮಂಚಿ (ಸಂಘಟನಾ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು.