ಮಣಿಪಾಲ: ರೈಸ್ ಮಿಲ್ ಮಿಷನ್ ತಾಗಿ ವ್ಯಕ್ತಿ ಮೃತ್ಯು

ಮಣಿಪಾಲ: ರೈಸ್ ಮಿಲ್ ಮಿಷನ್ ತಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬಾಳ್ಕಟ್ಟದ ರೈಸ್ ಮಿಲ್ ನಲ್ಲಿ ಸಂಭವಿಸಿದೆ.

ಮೃತರನ್ನು ಕೃಷ್ಣ ನಾಯ್ಕ್ (60) ಎಂದು ಗುರುತಿಸಲಾಗಿದೆ. ಇವರು ಬಾಳ್ಕಟ್ಟದ ಅನಿತಾ ನಾಯಕ್ ಮಾಲೀಕತ್ವದ ರೈಸ್ ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು‌.

ಇಂದು ಮಧ್ಯಾಹ್ನ 12.15 ಸುಮಾರಿಗೆ ಆಕಸ್ಮಿಕವಾಗಿ ಮಿಷನ್ ತಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.