ಮಣಿಪಾಲ: ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಸ್ಥಳೀಯ ಜನರಿಗೆ ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದೊಂದಿಗೆ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ಥಾಪಿತವಾದ ‘ರೀಮ್ ಕಂಪೆನಿ’ಯ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿವೆ.
ದಿನನಿತ್ಯದ ಗೃಹಬಳಕೆಗೆ ಉಪಯೋಗವಾಗುವಂತಹ ಹ್ಯಾಂಡ್ ಮತ್ತು ಡಿಶ್ ವಾಷ್, ಪ್ಲೋರ್ ಕ್ಲೀನರ್, ಫಿನೈಲ್ ಮೊದಲಾದ ಸುಗಂಧಭರಿತ ಉತ್ಪನ್ನಗಳು ಇಲ್ಲಿ ತಯಾರಾಗುತ್ತಿದೆ.
ಗೃಹ ಬಳಕೆ ಉತ್ಪನ್ನ ಲಭ್ಯ:
ಮನೆಗಳಲ್ಲಿ ದಿನನಿತ್ಯ ಬಳಕೆಯಾಗುವಂತಹ
ಬ್ರ್ಯಾಂಡ್ ನ ಟಾಯ್ಲೆಟ್ ಕ್ಲೀನರ್, ಪರ್ಪ್ಯೂಮ್ಡ್ ಪ್ಲೋರ್ ಸರ್ಫೇಸ್ ಕ್ಲೀನರ್, ಡಿಶ್ ವಾಷ್ ಲಿಕ್ವಿಡ್, ಲಿಕ್ವಿಡ್ ಡಿಟರ್ಜೆಂಟ್ 1ಲೀ., 500 ಮತ್ತು 200 ಎಂಎಲ್ ಪ್ಲಾಸ್ಟಿಕ್ ಬಾಟಲ್ ನಲ್ಲಿ ದೊರೆಯಲಿದೆ.
ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ರೋಸ್, ಲೆಮನ್ ಸುಗಂಧಿತ ಫಿನೈಲ್ ಹಾಗೂ ಎಲ್ಲ ಬಗೆಯ ಸುಗಂಧಭರಿತ ಉತ್ಪನ್ನಗಳು, ಸ್ಕೋರ್ ಬ್ರ್ಯಾಂಡ್ ನ ರೋಸ್, ಲೆಮನ್, ಸ್ಯಾಂಡಲ್ ಸುಗಂಧಿತ 250 ml ಹ್ಯಾಂಡ್ ವಾಷ್ ಲಭ್ಯವಿದೆ. ಸ್ವಿಜ್ಜರ್ ಬ್ರ್ಯಾಂಡ್ ನ ಗ್ಲಾಸ್ ಕ್ಲೀನರ್, ಫ್ಯಾಬ್ರಿಕ್ ಸಾಫ್ಟ್ ನರ್ 500 ಮತ್ತು 200 ml ಪ್ಲಾಸ್ಟಿಕ್ ಬಾಟಲ್ ನಲ್ಲಿ ಮತ್ತು ಎಫಿನೋರ್ ಬ್ರ್ಯಾಂಡ್ ನ ಕಾರ್ ಶಾಂಪೂ ಇನ್ನಿತರ ಉತ್ಪನ್ನಗಳು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ವಿಶೇಷ ಆಫರ್:
ರೀಮ್ ಉತ್ಪನ್ನಗಳ ಮಾರುಕಟ್ಟೆ ಬಿಡುಗಡೆಯ ಅಂಗವಾಗಿ ಸಂಸ್ಥೆ ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ. ಒಂದು ಕೊಂಡರೆ ಒಂದು ಉಚಿತ ಎಂಬ ಆಫರ್ ಘೋಷಿಸಿದ್ದು, ಈ ಆಫರ್ ವಿಶೇಷ ರಿಯಾಯಿತಿ ದರದಲ್ಲಿ ಜಿಲ್ಲೆಯ ಎಲ್ಲ ಸೂಪರ್ ಮಾರ್ಕೆಟ್ ಮತ್ತು ಮಳಿಗೆಗಳಲ್ಲಿ ದೊರೆಯಲಿದೆ. ಗ್ರಾಹಕರಿಗೆ ಟಾಯ್ಲೆಟ್ ಕ್ಲೀನರ್ 500 ಎಂಎಲ್+ ಪ್ಲೋರ್ ಕ್ಲೀನರ್ 500 ಎಂಎಲ್ + ಡಿಶ್ ವಾಷ್ ಲಿಕ್ವಿಡ್ 250 ಎಂಎಲ್ ಕಾಂಬೋ ಫ್ಯಾಮಿಲಿ ಪ್ಯಾಕ್ ಲಭ್ಯವಿದೆ.
ರೀಮ್ ಕಂಪೆನಿ ಉತ್ಕೃಷ್ಟ ಗುಣಮಟ್ಟ ಉತ್ಪನ್ನಗಳನ್ನು ತಯಾರಿಸಬೇಕೆಂಬ ನಿಟ್ಟಿನಲ್ಲಿ ಹೆಚ್ಚು ಆದ್ಯತೆ ಕೊಟ್ಟಿದೆ. ಅದರಂತೆ ಘಟಕದಲ್ಲಿ ರಾಸಾಯನ ತಜ್ಞರು ಹಾಗೂ ನುರಿತ ಕಾರ್ಮಿಕರಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಪ್ರಾಯೋಗಿಕವಾಗಿ ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿಗೆ ಮಣಿಪಾಲ-ಅಲೆವೂರು ರಸ್ತೆಯ ದಶರಥನಗರದ ಎಂಆ್ಯಂಡ್ ಎಂ ಟವರ್ಸ್ ನ ಪ್ರಥಮ ಮಹಡಿಯಲ್ಲಿರುವ ರೀಮ್ ಇಂಡಸ್ಟ್ರೀಸ್ ನ ಕಚೇರಿ ಅಥವಾ ಇ-ಮೇಲ್ ([email protected]) ಸಂಪರ್ಕಿಸಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜಿತೇಂದ್ರ ಹೆಗ್ಡೆ ತಿಳಿಸಿದ್ದಾರೆ.