ಮಣಿಪಾಲ: ಪೊಲೀಸರಿಗೆ ಹಲ್ಲೆ, ದೂರು ದಾಖಲು

ಮಣಿಪಾಲ: ಬಾರ್ ವೊಂದರ ಮುಂದೆ ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಲು ಹೋದ ಪೊಲೀಸರಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಣಿಪಾಲದ ವಿದ್ಯಾರತ್ನ ನಗರದಲ್ಲಿ ಫೆ. 4ರಂದು ರಾತ್ರಿ ನಡೆದಿದೆ.

ಠಾಣಾ ಎ.ಎಸ್.ಐ ನಾಗೇಶ್ ನಾಯಕ್‌, ಪ್ರೋ. ಪಿಎಸ್.ಐ ಸುಷ್ಮಾ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮಣಿಪಾಲ ವಿದ್ಯಾರತ್ನ ನಗರದ ಬಾರ್ & ರೆಸ್ಟೋರೆಂಟ್‌‌ ಮುಂದೆ ಸಿದ್ದಾರ್ಥ್, ಅಭಿಷೇಕ್‌ ಮತ್ತು ಇತರರ ಜೊತೆಗೆ ರಂಜನ್ ಕುಮಾರ್‌ ಎಂಬಾತ ಜಗಳವಾಡುತ್ತಿದ್ದನು. ಇದನ್ನು ಪ್ರಶ್ನಿಸಲು ಹೋಗಿದ್ದ ಪೊಲೀಸರಿಗೆ ರಂಜನ್ ಕುಮಾರ್ ಎಂಬಾತ ಅವಾಚ್ಯವಾಗಿ ಬೈದು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪೊಲೀಸ್ ಇಲಾಖಾ ವಾಹನದ ಚಾಲಕರಾಗಿರುವ ಸತೀಶ್ ಶೆಟ್ಟಿ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.