ಮಣಿಪಾಲ MSDC ವತಿಯಿಂದ ಏಪ್ರಿಲ್ 4 ರಂದು ಎಐ ಆಧಾರಿತ ಫಾರ್ಮ ಕಾರ್ಯಾಗಾರ: ಉಚಿತ ನೋಂದಣಿ.!

ಮಣಿಪಾಲ: Manipal Skill Development Centre ವತಿಯಿಂದ Manipal College of Pharmaceutical Sciences ಸಹಯೋಗದಲ್ಲಿ “NextGen AI for Pharmaceutical Science” ವಿಷಯದ ವಿಶೇಷ ಕಾರ್ಯಕ್ರಮವನ್ನು ಏಪ್ರಿಲ್ 4 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಏರ್ಪಡಿಸಲಾಗಿದೆ. ಮಣಿಪಾಲದ ಎಂಸಿಒಪಿಎಸ್ನ ಪ್ರೊ. ಪಿ. ಗುಂಡು ರಾವ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ, ಕಾರ್ಯಕ್ರಮಕ್ಕೆ ಉಚಿತ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಔಷಧ ಸಂಶೋಧನೆ (Drug Discovery), ಕ್ಲಿನಿಕಲ್ ಡೇಟಾ ವಿಶ್ಲೇಷಣೆ, ಎಐ ಮಾದರಿಗಳು, ಫಾರ್ಮಾ ಕೇಸ್ ಸ್ಟಡಿಗಳು ಹಾಗೂ NextGen AI ಸಾಧನಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತದೆ.
ಕಾರ್ಯಕ್ರಮದ ಮುಖ್ಯ ಆಶ್ರಯಕರಾಗಿ ಬ್ರಿಗೇಡಿಯರ್ (ಡಾ.) ಸುರಜಿತ್ ಸಿಂಗ್ ಪಾಬ್ಲಾ ಹಾಗೂ ಆಶ್ರಯಕರಾಗಿ ಡಾ. ಶ್ರೀನಿವಾಸ್ ಮುತಾಲಿಕ್ ಭಾಗವಹಿಸಲಿದ್ದಾರೆ. ತಜ್ಞ ವಕ್ತಾರರಾಗಿ ಡಾ. ಸುರೂಲಿವೇಲ್ ರಾಜನ್ ಎಂ, ಡಾ. ಅಭಿಜೀತ್ ಪಾಂಡೆ (ನವಾರ್ಟಿಸ್, ಹೈದರಾಬಾದ್ – ವರ್ಚುವಲ್) ಹಾಗೂ ಮಿಸ್ ರಾಜಲಕ್ಷ್ಮಿ ಅನಂದನ್ ಉಪಸ್ಥಿತರಿರುತ್ತಾರೆ.
ಫಾರ್ಮಾಸ್ಯೂಟಿಕಲ್ ಕ್ಷೇತ್ರದಲ್ಲಿ ಎಐ ಬಳಕೆಯ ಮಹತ್ವವನ್ನು ಪರಿಚಯಿಸುವುದು ಮತ್ತು ಆರೋಗ್ಯ ಸೇವಾ ನವೀನತೆಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.