ಮಣಿಪಾಲ: ಡಾ. ಟಿಎಂಎ ಪೈ ಫೌಂಡೇಶನ್ ಆಡಳಿತಕ್ಕೊಳಪ್ಪಟ್ಟ ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ (MSDC) ಕೊಂಕಣ್ ರೇಲ್ವೆ ಕೋರ್ಪರೇಶನ್ ಜಂಟಿಯಾಗಿ 100 ಕುಶಲಕರ್ಮಿಗಳಿಗೆ ಐದು ದಿನ ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 15 ರಂದು ಹಮ್ಮಿಕೊಂಡಿತು. ತರಬೇತುದಾರರಿಗೆ ವಿಶೇಷ ಕ್ಲಾಸ್ ರೂಂ ಜೊತೆಗೆ ಪ್ರಾತ್ಯಕ್ಷಿಕೆ ತರಗತಿ, ಪ್ರಾಯೋಗಿಕ ತರಗತಿಗಳನ್ನೂ ಹಮ್ಮಿಕೊಳ್ಳಲಾಯಿತು. ತಂತ್ರಜ್ಞಾನವನ್ನೂ ಅಳವಡಿಸಿ ಮಾಹಿತಿ ನೀಡಲಾಯಿತು.

ಎಂ.ಎಸ್.ಡಿ.ಸಿ ಅಧ್ಯಕ್ಷರಾದ ಡಾ.ಸುರ್ಜಿತ್ ಸಿಂಗ್ ಪಾಬ್ಲಾ, ಸಂಸ್ಥೆಯ ಉದ್ದೇಶಗಳು ಮತ್ತು ಸೌಲಭ್ಯಗಳ ಕುರಿತು ಮನನೀಯ ಅವಲೋಕನವನ್ನು ನೀಡಿದರು.
ಕೆ.ಆರ್.ಸಿ.ಎಲ್ ಪ್ರಶಿಕ್ಷಣ ಮತ್ತು ಅಭಿವೃದ್ಧಿ ವ್ಯವಸ್ಥಾಪಕರಾದ ಶ್ರಿಧರ ಅವಭ್ರಥ್, ಕಲಾವಿದರ ತಾಂತ್ರಿಕ ನೈಪುಣ್ಯ ವೃದ್ಧಿಯಲ್ಲಿ ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಡಾ. ಟಿ. ಎಂ. ಎ. ಪೈ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ. ಬಿ. ಹೆಚ್. ವಿ. ಪೈ ಅವರು ಪ್ರೇರಣಾದಾಯಕ ಸಂದೇಶವನ್ನು ನೀಡಿದರು. ಕಾರ್ಯಕ್ರಮ ಸಂಯೋಜಕರಾದ
ಡಾ. ನಾಗರಾಜ, ವಿವಿಧ ಮಾಹಿತಿ ನೀಡಿದರು. ಡಾ. ಎ. ಗಣೇಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕು. ಮಂಗಳಾ ಕೆ ನಿರ್ವಹಿಸಿದರು ಮತ್ತು ಅಶ್ವಿನ್ ಕುಮಾರ್ ವಂದಿಸಿದರು.


















