ಮಣಿಪಾಲ: ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್ ಮ್ಯಾರಥಾನ್ 2023ರ 5 ನೇ ಆವೃತ್ತಿಯನ್ನು ಘೋಷಿಸಿತು. ಮಾಹೆ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಎನ್.ಇ.ಬಿ ಸ್ಪೋರ್ಟ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಮ್ಯಾರಥಾನ್ ಆಯೋಜಿಸಲಾಗುವುದು.
ಮಣಿಪಾಲ್ ಮ್ಯಾರಥಾನ್‌ನ 5 ನೇ ಆವೃತ್ತಿಯು ಬಾಲ್ಯದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. “ಆರಂಭಿಕ ಪತ್ತೆ ಜೀವಗಳನ್ನು ಉಳಿಸುತ್ತದೆ-ಐ ಕ್ಯಾನ್ ಸರ್-ವೈವ್” ಎನ್ನುವ ಅಡಿಬರಹದೊಂದಿಗೆ ಮ್ಯಾರಥಾನ್ ಆಯೋಜನೆಗೊಳ್ಳಲಿದೆ. ಈ ಮ್ಯಾರಥಾನ್ ಮೂಲಕ ಹಣವನ್ನು ಸಂಗ್ರಹಿಸಲಾಗುತ್ತದೆ ಮತ್ತು ಸಂಗ್ರಹವಾದ ಹಣವನ್ನು ಬಾಲ್ಯದ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣಕಾಸಿನ ನೆರವಿನ ಅಗತ್ಯವಿರುವ ಜನರಿಗೆ ಬೆಂಬಲ ಮತ್ತು ಕಾಳಜಿಗಾಗಿ ವಿನಿಯೋಗಿಸಲಾಗುತ್ತದೆ.
ಮ್ಯಾರಥಾನ್ ಅನ್ನು 12 ಫೆಬ್ರವರಿ 2023 ರಂದು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಆಯೋಜಿಸಲಾಗುವುದು. ಮ್ಯಾರಥಾನ್ ನಲ್ಲಿ ಸುಮಾರು 15000 ಓಟಗಾರರ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಆಯೋಜಿಸಿದ್ದ ಮ್ಯಾರಥಾನ್ ದೇಶ ವಿದೇಶದ ಓಟಗಾರರನ್ನು ಆಕರ್ಷಿಸಿತ್ತು. ಹಿಂದಿನ ಆವೃತ್ತಿಗಳಲ್ಲಿ ಇಥಿಯೋಪಿಯಾ, ಜರ್ಮನಿ, ಕೀನ್ಯಾ, ಇಂಗ್ಲೆಂಡ್, ನೇಪಾಳ, ಮಲೇಷ್ಯಾ ಮತ್ತು ಶ್ರೀಲಂಕಾದ ಓಟಗಾರರು ಭಾಗವಹಿಸಿದ್ದರು ಎಂದು ಸಂಸ್ಥೆಯು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹೆ ಕುಲಪತಿ ಡಾ.ಎಚ್.ಎಸ್.ಬಲ್ಲಾಲ್, ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂಡಿ ವೆಂಕಟೇಶ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ನ ಅಧ್ಯಕ್ಷ, ಶಾಸಕ ಕೆ ರಘುಪತಿ ಭಟ್, ಎನ್‌ಇಬಿ ಕ್ರೀಡಾ ನಿರ್ದೇಶಕ, ಅರ್ಜುನ ಪ್ರಶಸ್ತಿ ಪುರಸ್ಕೃತ ರೀತ್ ಅಬ್ರಹಾಂ, ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಉಪಕುಲಪತಿ ಡಾ ವೆಂಕಟರಾಯ ಎಂ ಪ್ರಭು, ರಿಜಿಸ್ಟ್ರಾರ್ ಡಾ ನಾರಾಯಣ ಸಭಾಹಿತ್, ಸ್ಪೋರ್ಟ್ಸ್ ಕೌನ್ಸಿಲ್ ಕಾರ್ಯದರ್ಶಿ ಡಾ ವಿನೋದ್ ಸಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಮ್ಯಾರಥಾನ್‌ನ ವಿಭಾಗಗಳು ಅನ್‌ಟೈಮ್ಡ್ 3ಸಾವಿರ ಫನ್ ರನ್ ಮತ್ತು ಕಾರ್ಪೊರೇಟ್ 3ಸಾವಿರ, ಮತ್ತು ಟೈಮ್ಡ್ 5ಸಾವಿರ, 10ಸಾವಿರ, 21ಸಾವಿರ ಮತ್ತು 42ಸಾವಿರ.
ಮಣಿಪಾಲ್ ಮ್ಯಾರಥಾನ್-2023 ಗಾಗಿ ನೋಂದಣಿಗಳು ಶೀಘ್ರದಲ್ಲೇ ತೆರೆಯಲ್ಪಡುತ್ತವೆ.