ಉಡುಪಿ: ಮಣಿಪಾಲ ಮಂಚಿಕೆರೆಯ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ ಕೆರೆಗೆ ಆಯತಪ್ಪಿ ಬಿದ್ದ ಹೋರಿವೊಂದನ್ನು ಸ್ಥಳೀಯ ಯುವಕರು ಹಗ್ಗದ ಸಹಾಯದಿಂದ ಮೇಲೆತ್ತಿ ಪ್ರಾಣ ಉಳಿಸುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ.
ಕೆರೆಯ ಬದಿಯಲ್ಲಿ ಮೇಯುತ್ತಿದ್ದ ಹೋರಿ ಆಯತಪ್ಪಿ ಕೆರೆಯ ನೀರಿಗೆ ಬಿದ್ದಿದೆ. ಹೋರಿ ಕೆರೆಯಲ್ಲಿ ಹೂತುಹೋಗಿ ಮೇಲೆ ಬರಲಾಗದೆ ಒದ್ದಾಡುತ್ತಿದ್ದು, ಇದನ್ನು ಗಮನಿಸಿದ ಯುವಕರು ಹಗ್ಗ ಹಾಗೂ ಇತರೆ ಸಲಕರಣೆಗಳನ್ನು ಬಳಸಿಕೊಂಡು ಹೋರಿಯನ್ನು ಮೇಲೆತ್ತಿದ್ದಾರೆ. ದಡಕ್ಕೆ ಬರುತ್ತಿದ್ದಂತೆ ಹೋರಿ ಓಟಕ್ಕಿತ್ತಿದೆ. ಯುವಕರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
















