ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಮಾರ್ಚ್ 20 ಮತ್ತು 21ರಂದು ಎರಡು ದಿನಗಳ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಮಾ. 20 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಕೊಂಕಣಿ ಶೋಭಾಯಾತ್ರೆಗೆ ಮಣಿಪಾಲದ ಟಿ. ಅಶೋಕ್ ಪೈ ಚಾಲನೆ ನೀಡುವರು. ಬಳಿಕ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೊಂಕಣಿ ಭಾಷೆ ಮಾತನಾಡುವಂತಹ ಸುಮಾರು 42 ಪಂಗಡಗಳ ಪ್ರತಿನಿಧಿಗಳಾಗಿ, ದೇಶ ವಿದೇಶಗಳಲ್ಲಿ ಹಲವಾರು ಸಾಧನೆ ಮಾಡಿದಂತಹ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತನಾಗ್ ಸೇರಿದಂತೆ ಕೊಂಕಣಿ ಭಾಷೆಗಾಗಿ ಸಾಮಾಜಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕವಿಗೋಷ್ಠಿ, ಕಥಾಗೋಷ್ಠಿ, ಸಂಗೀತಗೋಷ್ಠಿ ಹಾಗೂ ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.
ಸಮ್ಮೇಳನದ ಸಮಿತಿ ರಚನೆ: ಗೌರವಾಧ್ಯಕ್ಷರಾಗಿ ಗೋಕುಲದಾಸ್ ನಾಯಕ್, ಅಧ್ಯಕ್ಷರಾಗಿ ಅಕಾಡೆಮಿಯ ಅಧ್ಯಕ್ಷ ಡಾ. ಜಗದೀಶ್ ಪೈ, ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಅಮೃತ್ ಶೆಣೈ, ಪ್ರಧಾನ ಸಂಚಾಲಕರಾಗಿ ಪೂರ್ಣಿಮಾ ಸುರೇಶ್, ಗೌರವ ಸಲಹೆಗಾರರಾಗಿ ಕುಯಿಲಾಡಿ ಸುರೇಶ್ ನಾಯಕ್ ಅವರು ಆಯ್ಕೆಯಾಗಿದ್ದರು.