ಮಣಿಪಾಲ: ಕಿಡ್ ಝೀ ಮಕ್ಕಳಿಂದ ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ರ‍್ಯಾಲಿ

ಮಣಿಪಾಲ: ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ಉದ್ದೇಶದೊಂದಿಗೆ ಆಗಸ್ಟ್ 23 ಮಂಗಳವಾರದಂದು ಕಿಡ್ ಝೀ ಮಣಿಪಾಲ ಶಾಲೆಯ ಮಕ್ಕಳು ರ‍್ಯಾಲಿಯೊಂದನ್ನು ಏರ್ಪಡಿಸಿದ್ದರು. ಶಾಲಾ ಮಕ್ಕಳು ಸಿಂಡಿಕೇಟ್ ವೃತ್ತದಿಂದ ಮಣಿಪಾಲ ಪೋಲೀಸ್ ಸ್ಟೇಷನ್ ವರೆಗೆ ಮೆರವಣಿಗೆ ನಡೆಸಿದರು. ರ‍್ಯಾಲಿಯು ಭೂಮಿ ಉಳಿಸಿ ಮತ್ತು ಪ್ಲಾಸ್ಟಿಕ್ ಬ್ಯಾನ್ ಮಾಡಿ ಎನ್ನುವ ಘೋಷಣೆಯನ್ನೂ ಹೊಂದಿತ್ತು.

ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಮಣಿಪಾಲ ಎಸ್.ಎಚ್.ಒ ಮಂಜುನಾಥ್, ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಶಾಲಾ ಮಕ್ಕಳಿಗೂ ಪೊಲೀಸ್ ಇಲಾಖೆಯ ಕಾರ್ಯಗಳನ್ನು ನೋಡುವ ಅವಕಾಶ ದೊರಕಿತು. ಎಸ್.ಎಚ್.ಒ ಮಂಜುನಾಥ್ ಮಕ್ಕಳಿಗೆ ಸಿಹಿ ವಿತರಿಸಿ ಔದಾರ್ಯ ಮೆರೆದರು.