ಮಣಿಪಾಲದಲ್ಲಿ ಕಲಾಸಿಲ್ಕ್ ಕಾಟನ್‌ ಎಕ್ಸ್‌ಫೋ : ಹ್ಯಾಂಡ್‌ ಲೂಮ್‌, ಹ್ಯಾಂಡಿಕ್ರಾಫ್ಟ್‌ ಬಟ್ಟೆಗಳು ನಿಮಗಾಗಿ ಕಾದಿವೆ

ಮಣಿಪಾಲ:ಹ್ಯಾಂಡ್‌ ಲೂಮ್‌, ಹ್ಯಾಂಡಿಕ್ರಾಫ್ಟ್‌ ಬಟ್ಟೆಗಳನ್ನು ಕೊಳ್ಳುವ ಮನಸ್ಸಾಗಿದೆಯೇ? ಹಾಗಿದ್ದರೆ ಮಣಿಪಾಲದಲ್ಲಿ ನಿಮ್ಮ ಕನಸು ನನಸಾಗಲಿದೆ.

ಮಣಿಪಾಲದ ಅಲೆವೂರು ರಸ್ತೆ, ಸಿಂಡಿಕೇಟ್ ಬ್ಯಾಂಕ್‌ ಹೆಡ್‌ ಆಫೀಸ್‌ನ ಹತ್ತಿರವಿರುವ ಆರ್‌.ಎಸ್‌.ಬಿ. ಸಭಾಭವನದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್‌ ಎಕ್ಸ್‌ಫೋ 2019 ಹ್ಯಾಂಡ್‌ ಲೂಮ್‌ ಮತ್ತು ಹ್ಯಾಂಡಿಕ್ರಾಫ್ಟ್‌ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದ್ದು ಇಲ್ಲಿ ನಿಮ್ಮ ಅಚ್ಚುಮೆಚ್ಚಿನ ಹ್ಯಾಂಡ್‌ ಲೂಮ್‌, ಹ್ಯಾಂಡಿಕ್ರಾಫ್ಟ್‌ ಬಟ್ಟೆಗಳು ಲಭ್ಯವಿದೆ..

ಏನೇನ್ ಸ್ಪೆಷಲ್?

ಅಂದ ಹಾಗೆ  ಪ್ರದರ್ಶನದಲ್ಲಿ ಆಂಧ್ರ ಪ್ರದೇಶದ ಧರ್ಮಾವರಂ, ವೆಂಕಟಗಿರಿ, ಮಂಗಳಗಿರಿ, ಕಾಲಾಂಕರಿ ಮತ್ತು ಉಪ್ಪಾಡ‌, ಅಸ್ಸಾಂನ ಮೂಗಾ ಎರಿ ಸಿಲ್ಕ್ಸ್ ಬಿಹಾರ ಬಾಗಲ್ಪುರ ಸಿಲ್ಕ್, ಟಸ್ಸರ್‌, ಛತ್ತೀಸ್‌ಗಢ್ನ ಟ್ರಿಬಲ್ ವರ್ಕ್ಸ್ ಕೋಸಾ ಸಿಲ್ಕ್ಸ್, ಗುಜರಾತಿನ ಬಾಂದನಿ, ಕಚ್ಚ ಎಂಬ್ರೈಡರಿ ಡ್ರೆಸ್ಸ್ ಸಾರೀಸ್‌, ಜಮ್ಮು-ಕಾಶ್ಮೀರದ ಎಂಬ್ರೈಡರಿ ಸಾರೀಗಳು, ಡ್ರೆಸ್‌ ಮೆಟೀರಿಯಲ್ಸ್, ಪಾಸ್ಮಿನ ಶಾಲ್, ಕರ್ನಾಟಕದ ಕ್ರೇಪ್‌ ಪ್ರಿಂಟೆಡ್‌ ಸಾರಿಗಳು, ಡ್ರೆಸ್‌ ಮೆಟೀರಿಯಲ್ಗಳು, ಮಧ್ಯಪ್ರದೇಶದ ಚಂದೇರಿ, ಪಶ್ಚಿಮ ಬಂಗಾಳದ ಬಾಲುಚರಿ, ತಂಗಾ, ಕಾಂತ. ರಿಯಾಯಿತಿ ದರದಲ್ಲಿ ಸಿಗಲಿದೆ.  24 ರಾಜ್ಯದ ವಸ್ತುಗಳ 100 ಕೌಂಟರ್‌ಗಳು ಇಲ್ಲಿದೆ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ವಸ್ತುಗಳು ಇಲ್ಲಿ  ಲಭ್ಯವಿದ್ದು, ಆಷಾಢ ಸ್ಪೆಷಲ್ ಆಫರ್‌ ಆಗಿ ಶೇ.65 ದರ ಕಡಿತ ಮಾರಾಟವಿದೆ. ಬೆಳಗ್ಗೆ 10.30ಯಿಂದ ರಾತ್ರಿ 9.30 ವರೆಗೆ ಮೇಳ ತೆರೆದಿರುತ್ತದೆ

ಡ್ರೆಸ್‌ ಮೆಟೀರಿಯಲ್ಸ್, ಡೋರ್‌ ಕರ್ಟನ್ಸ್‌, ಜೈಪುರಿ ಸ್ಟೋನ್‌ ಜ್ಯುವೆಲ್ಲರಿ,ಹರಿಯಾಣ ಬೆಡ್‌ ಕವರ್‌ಗಳು, ಕುಶನ್‌ ಕವರ್ . ಲಕ್ನೋವಿ ಕುರ್ತಿಸ್‌ ಪಲ್ಸ್ರ್, ವುಡನ್‌ ಹ್ಯಾಂಡಿಕ್ರಾಫ್ಟ್‌, ಬಂಜಾರ, ಕೋಲ್ಕತ್ತ ಬ್ಯಾಗ್ಸ್‌ , ಒರಿಸ್ಸಾ ಪೈಟಿಂಗ್‌,ಹ್ಯಾಂಡಿಕ್ರಾಫ್ಟ್‌ ಕೂಡ ಇಲ್ಲಿ ಲಭ್ಯವಿದೆ. ಮಕ್ಕಳಿಗಾಗಿ ಪ್ರತ್ಯೇಕ ಕೌಂಟರ್‌ಗಳಿದ್ದು, ಮಕ್ಕಳಿಗಾಗಿ ಶೇ.100 ಕಾಟನ್‌ ವೇರ್‌ಗಳು ರೂ. 19,29,39,49,59,69,99ಕ್ಕೆ ಲಭ್ಯವಿರಲಿದೆ.

ಪ್ರದರ್ಶನ ಮತ್ತು ಮಾರಾಟವು ಆ.21ರಿಂದ ಪ್ರಾರಂಭಗೊಂಡು ಸೆ.5ರ ವರೆಗೆ  ನಡೆಯಲಿದ್ದು, ಮಣಿಪಾಲ ಆಗು ಇಲ್ಲಿನ ಆಸುಪಾಸಿನ ಜನರು ಭೇಟಿ ನೀಡಿ ತಮ್ಮ ಅಚ್ಚುಮೆಚ್ಚಿನ ಬಟ್ಟೆಗಳನ್ನು ಆಯ್ದುಕೊಳ್ಳಬೇಕು ಎಂದು  ಕಂಪನಿಯ ವಕ್ತಾರ ಸಂಜಯ್‌  ತಿಳಿಸಿದ್ದಾರೆ.