ಮಣಿಪಾಲ: ಮಣಿಪಾಲ MSDC ವತಿಯಿಂದ ಮಾರ್ಚ್ 9, ರಂದು ಬೆಳಿಗ್ಗೆ 11 ಗಂಟೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತನೂಜಾ ಮಾಬೆನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “Emotional Independence” (ಭಾವನಾತ್ಮಕ ಸ್ವಾತಂತ್ರ್ಯ) ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಹಿಳೆಯರು ತಮ್ಮ ಸಂತೋಷವನ್ನು ತಮ್ಮೊಳಗಿನಿಂದಲೇ ಕಂಡುಕೊಳ್ಳಬೇಕು ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಸಕ್ತರು ಉಚಿತ ನೋಂದಣಿ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞8123165068
📍 ಓರನೆ ಇಂಟರ್ನ್ಯಾಷನಲ್, MSDC ಬಿಲ್ಡಿಂಗ್, 3ನೇ ಮಹಡಿ ಈಶ್ವರ್ ನಗರ ಮಣಿಪಾಲ್

















