ಮಣಿಪಾಲ: ಗೃಹರಕ್ಷಕ ಕಾರ್ತಿಕ್ ಅವರಿಗೆ ಚಿನ್ನದ ಪದಕ

ಉಡುಪಿ: ಜಿಲ್ಲಾ ಗೃಹರಕ್ಷಕ ದಳದ ಮಣಿಪಾಲ ಘಟಕದ ಗೃಹರಕ್ಷಕ ಕಾರ್ತಿಕ್ ಇವರು ಮೇ 2 ರಿಂದ 13 ರವರೆಗೆ ದಾವಣಗೆರೆಯ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ  ನಡೆದ ಗೃಹರಕ್ಷಕರ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ.

ಇವರನ್ನು ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ ಗೃಹರಕ್ಷಕ ದಳದ ಸಂಸ್ಥೆಯ ವತಿಯಿಂದ ಅಭಿನಂದಿಸಿರುತ್ತಾರೆ.