ಉಡುಪಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಉಚಿತ ಮಾಹಿತಿ ಕಾರ್ಯಾಗಾರ ಫೆಬ್ರವರಿ 8ರ ಮಂಗಳವಾರ ಸಂಜೆ 4.30 ಯಿಂದ 6 ರವರೆಗೆ 8, 9, 10ನೆಯ ತರಗತಿಯ ರಾಜ್ಯ ಹಾಗೂ ಸಿ.ಬಿ.ಎಸ್.ಇ ವಿದ್ಯಾರ್ಥಿಗಳಿಗೆ ಟಿಪ್ಸ್ ಅ್ಯಂಡ್ ಟ್ರಿಕ್ಸ್ (Tips and Tricks) ಮಾಹಿತಿ ಕಾರ್ಯಾಗಾರವನ್ನು ಮಣಿಪಾಲದ ಡಿಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ ಹಬ್ ಕಾಂಪ್ಲೆಕ್ಸ್ ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದ ಟ್ರೈನಿಂಗ್ ಇನ್ಸ್ವಿಟ್ಯೂಟ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಪರಿಣಿತ ಅನುಭವೀ ಅಧ್ಯಾಪಕರಿಂದ ಪರೀಕ್ಷಾ ದೃಷ್ಟಿಯಿಂದ ಸಲಹೆ/ ಸೂಚನೆಗಳನ್ನು ನೀಡಲಾಗುವುದು.
ನುರಿತ ಶಿಕ್ಷಕರು ಯಾವ ರೀತಿಯಲ್ಲಿ ಪ್ರಶ್ನಾವಳಿಯನ್ನು ಉತ್ತರಿಸುವುದು/ಸಮಯದ ಸದುಪಯೋಗ ಹೇಗೆ ಮಾಡಬಹುದು ಎಂಬ ಬಗ್ಗೆ ಪುನರಾವರ್ತಿತ ಪ್ರಶ್ನಾಪತ್ರಿಕೆಗಳ ಮೂಲಕ ವಿವರಿಸಿ ಹೇಗೆ ಉತ್ತಮ ಅಂಕಗಳನ್ನು ಗಳಿಸುವುದು ಎಂಬ ಬಗ್ಗೆ ನುರಿತ ಶಿಕ್ಷಕರು ತಿಳಿಸಿ ಕೊಡಲಿದ್ದಾರೆ. ಈ ಕಾರ್ಯಾಗಾರದ ಸದುಪಯೋಗ ಪಡೆಯುವಂತೆ ಸಂಸ್ಥೆಯ ಪ್ರಕಟನೆಯಲ್ಲಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸುನೀತಾ ಅವರನ್ನು ಸಂಪರ್ಕಿಸಬಹುದು. ಪೂರ್ವ ನೋಂದಾವಣೆಗಾಗಿ ಸಂಪರ್ಕಿಸಿ: 9901722527