ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್: ಪ್ರವೇಶಾತಿ ಆರಂಭ

ಉಡುಪಿ: ತಾಂತ್ರಿಕ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಮಣಿಪಾಲದ ಡಾ| ಟಿಎಂಎ ಪೈ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2023- 24 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭಗೊಂಡಿದೆ.

ಉಡುಪಿ ಡಾ. ಟಿಎಂಎ ಪೈ ಫೌಂಡೇಶನ್ ಅಂಗ ಸಂಸ್ಥೆಯಾಗಿರುವ ಈ ಪಾಲಿಟೆಕ್ನಿಕ್ ಸಂಸ್ಥೆಯು ಕಳೆದ 26 ವರ್ಷಗಳಿಂದ ಮಣಿಪಾಲದ ಈಶ್ವರ ನಗರದಲ್ಲಿ ಕಾರ್ಯಚರಿಸುತ್ತಿದೆ.

ಹೈ ಎಂಡ್ ಸ್ಪೆಷಲೈಜೇಶನ್ ಇನ್ ಡಿಪ್ಲೋಮೋ ಪ್ರೋಗ್ರಾಮ್:

ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯ ಸಂಯೋಜನೆ ಪಡೆದ, ಎಲ್ಲ ಕೋರ್ಸ್ ಗಳು ಆ.ಭಾ. ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಮಾನ್ಯತೆ ಪಡೆದಿರುವ ಈ ಸಂಸ್ಥೆ ಆಟೋಮೊಬೈಲ್, ಸಿವಿಲ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಪ್ರಿಂಟಿಂಗ್ ಟೆಕ್ನಾಲಜಿ ಡಿಪ್ಲೋಮೋ ಕೋರ್ಸ್ ಗಳಲ್ಲಿ ಹೈ ಎಂಡ್ ಸ್ಪೆಷಲೈಜೇಶನ್ ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ವರ್ಕ್ ಶಾಪ್, ಲ್ಯಾಬೋರೇಟರಿಗಳನ್ನು ಅಳವಡಿಸುವ ಮೂಲಕ ಪಾಲಿಟೆಕ್ನಿಕ್ ಅಪ್ ಗ್ರೇಡ್ ಆಗಿದ್ದು, ಕೈಗಾರಿಕೆಗಳಿಗೆ ಪೂರಕವಾದ ಅತ್ಯಾಧುನಿಕ ಯಂತ್ರಗಳು, ಪರಿಕರಗಳನ್ನು ಹೊಂದಿದೆ.

ಸಂಸ್ಥೆಯಲ್ಲಿ ಅತ್ಯಾಧುನಿಕ ಸೌಲಭ್ಯದ ವರ್ಕ್ ಶಾಪ್ ಮತ್ತು ಲ್ಯಾಬೊರೇಟರಿ ಜೊತೆಗೆ ಯಂತ್ರಗಳು, ಪರಿಕರಗಳನ್ನು ಹೊಂದಿದ್ದು, ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಹೆಚ್ಚು ಬೇಡಿಕೆ ಇದೆ. ಅಲ್ಲದೆ ವಿದ್ಯಾರ್ಥಿಗಳು ಬಿ. ಟೆಕ್/ ಬಿ.ಇ. ಮೊದಲಾದ ಕೋರ್ಸ್ ಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದು, ಲ್ಯಾಟರಲ್ ಎಂಟ್ರಿ ಮೂಲಕ ಎಂಐಟಿ ಅಥವಾ ರಾಜ್ಯದ ಬೇರೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಮುಂದುವರಿಸಬಹುದು, ದ್ವಿತೀಯ ಪಿಯುಸಿ ಪೂರೈಸಿ ಡಿಪ್ಲೋಮಾ ಸೇರುವ ವಿದ್ಯಾರ್ಥಿಗಳಿಗೆ ಅದೇ ಸಮಯದಲ್ಲಿ (ಬಿ.ಕಾಂ, ಬಿಬಿಎ, ಜಿಎಸಿ) ಪದವಿ ಕೋರ್ಸ್ ಗಳನ್ನು ಪಡೆಯಲು ಸರಕಾರದ ನಿಯಮದಂತೆ ಅವಕಾಶ ಕಲ್ಪಿಸಲಾಗುವುದು.

ವಿವಿಧ ಕೋರ್ಸ್ ಗಳು:

ಮೆಕ್ಯಾನಿಕಲ್ ಇಂಜಿನಿಯರಿಂಗ್, ವಿದ್ಯಾರ್ಥಿಗಳಿಗೆ ರೋಬೋಟಿಕ್ ಅಂಡ್ ಆಟೋಮೇಶನ್, ಸಿಎನ್ ಸಿ ಪ್ರೊಗ್ರಾಮ್ ಅಂಡ್ ಆಪರೇಷನ್, 3ಡಿ ಪ್ರಿಂಟಿಂಗ್, ಫರ್ನಿರ್ಚರ್ ಅಂಡ್ ಇಂಟಿರಿಯರ್ಸ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕಲ್ ವೆಹಿಕಲ್ಸ್, ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಅಂಡ್ ಆಟೋಮೇಶನ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಅಂಡ್ ಪಿಸಿಬಿ ಮೇಕಿಂಗ್, ಪ್ರಿಂಟಿಂಗ್ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಿಂಟಿಂಗ್ ಅಂಡ್ ಡಿಟಿಪಿ, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವೆಬ್, ಆಪ್, ಸಾಫ್ಟ್ ವೇರ್ ಡೆವಲಪ್ ಮೆಂಟ್, ಆಟೋಮೊಬೈಲ್ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಸರ್ವಿಸ್ ಸ್ಟೇಷನ್ ಆಪರೇಶನ್ ಮತ್ತು ಎಲೆಕ್ಟ್ರಾನಿಕ್ ವಹಿಕಲ್ ತಂತ್ರಜ್ಞಾನವನ್ನು ಬೋಧಿಸಲಾಗುತ್ತದೆ.

ಸಂಸ್ಥೆಯಿಂದ ಅತ್ಯುತ್ತಮವಾದ ಪ್ಲೇಸ್ ಮೆಂಟ್:

ಏಕಕಾಲದಲ್ಲಿ ಎರಡು ಪದವಿ ಪಡೆಯಬಹುದಾದ ಅವಕಾಶವೂ ಇದೆ. ಸಂಸ್ಥೆಯಲ್ಲಿ ಅತ್ಯುತ್ತಮವಾದ ಪ್ಲೇಸ್ ಮೆಂಟ್ ಸೆಲ್ ಇದ್ದು, ಅಂತಿಮ ವರ್ಷದ ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳು ಟೊಯೋಟೊ, ಕಿರ್ಲೋಸ್ಕರ್, ವರ್ಕ್ಸಜ್ ಗ್ರೂಪ್ ದುಬೈ, ವಿಪ್ರೋ ಮಣಿಪಾಲ್ ಟೆಕ್ನಾಲಜಿಸ್, ಗ್ಲಟ್ ಸಿಸ್ಟಮ್, ಇಸ್ರೇಲ್ ಪ್ಯಾಕಿಂಗ್, ಅಲ್ಬಿಯಾ ಗ್ರೂಪ್ ಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಡಿಪ್ಲೋಮಾ ಕೋರ್ಸ್ ನ ಅಂತಿಮ ಸೆಮಿಸ್ಟರ್ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳಲ್ಲಿ ಅಪ್ರೆಂಟಿಸ್ ಶಿಪ್ ಇರಲಿದೆ.

ಪ್ರವೇಶಾತಿ ಆರಂಭ:

2023- 24 ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಇದೀಗ ಆರಂಭವಾಗಿದೆ. ಎಸೆಸೆಲ್ಸಿ ಅಥವಾ ತತ್ಸಮಾನ ತರಗತಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಮೊದಲ ವರ್ಷದ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶ ಪಡೆಯಬಹುದು. ಐಟಿಎ, ದ್ವಿತೀಯ ಪಿಯುಸಿ (ವಿಜ್ಞಾನ) ಪೂರೈಸಿದ ವಿದ್ಯಾರ್ಥಿಗಳು ನೇರವಾಗಿ ದ್ವಿತೀಯ ವರ್ಷದ ಡಿಪ್ಲೋಮೋ ಕೋರ್ಸ್ ಗೆ ದಾಖಲಾತಿ ಪಡೆಯಬಹುದು. ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಸರಕಾರದ ವಿದ್ಯಾರ್ಥಿ ವೇತನದೊಂದಿಗೆ ವಿವಿಧ ಮೂಲಗಳಿಂದ ನಿಧಿ ಒದಗಿಸಲು ಸಂಸ್ಥೆ ಪ್ರೋತ್ಸಾಹಿಸಲಿದೆ. http://tmapaipolytechnic.com ಮಾಹಿತಿಗೆ ವೆಬ್ ಸೈಟ್ ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.