ಗಣರಾಜ್ಯೋತ್ಸವದ ಅಂಗವಾಗಿ ಸಹರಾ ತಂಡದ ವತಿಯಿಂದ ಮಣಿಪಾಲದ ಸರಳೇಬೆಟ್ಟುವಿನ ಸ್ಲಮ್ ನಲ್ಲಿ ವಾಸಿಸುತ್ತಿರುವ ಬಡವರಿಗೆ ಬಟ್ಟೆಗಳನ್ನು ಗುರುವಾರ ವಿತರಿಸಲಾಯಿತು.
ಸಹರಾ ತಂಡದ ವತಿಯಿಂದ ಉಡುಪಿ, ಮಣಿಪಾಲ ಸಹಿತ ಜಿಲ್ಲೆಯ ವಿವಿಧೆಡೆ ಇರುವ ಸುಮಾರು ಮೂರು ಸಾವಿರಕ್ಕೂ ಅಧಿಕ ಬಡವರಿಗೆ ಬಟ್ಟೆಗಳನ್ನು ವಿತರಣೆ ಮಾಡಲಾಯಿತು.
ಸಹಾರಾ ತಂಡವು ಉಡುಪಿ ಜಿಲ್ಲೆ ಹಾಗೂ ಹೊರಗಿನಿಂದ ಸುಮಾರು 3500ರಿಂದ 4000 ಸಾವಿರ ಬಟ್ಟೆಗಳನ್ನು ಸಂಗ್ರಹಿಸಿದೆ. ಅವುಗಳನ್ನು ಜಿಲ್ಲೆಯ ವಿವಿಧ ಕಡೆ ಬಡವರಿಗೆ ವಿತರಿಸುವ ಕಾರ್ಯ ನಡೆಯುತ್ತಿದೆ.
ಕಳೆದ ಮೂರು ವರ್ಷಗಳಿಂದ ಈ ತಂಡವು ಬಡವರು, ನಿರ್ಗತಿಕರಿಗೆ ಸಹಾಯ ಮಾಡುತ್ತಿದೆ ಎಂದು ಸಹರಾ ತಂಡದ ಸಂಸ್ಥಾಪಕ ಪ್ರಥಮ್ ಪೂಜಾರಿ ತಿಳಿಸಿದರು.
ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಆದಿತ್ಯ ಶೆಟ್ಟಿ, ಕವನ ಕೆ. ಆಚಾರ್ಯ, ಧನುಷ್ ಬಿ.ಕೆ, ಕಾರ್ತಿಕ್, ಅಂಬಿಕಾ ಆಚಾರ್ಯ, ಅಂಜಲಿ ಶೇಟ್, ನವಾಜ್, ಸೂರಜ್ ಆಚಾರ್ಯ ಇದ್ದರು.