ಮಣಿಪಾಲ: ಸೆ.29ಕ್ಕೆ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞರೊಂದಿಗೆ ಮಾತುಕತೆ- ಸಂವಾದ

ಮಣಿಪಾಲ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ವಿಶ್ವ ಹೃದಯ ದಿನ 2021ರ ಅಂಗವಾಗಿ ಇದೇ ಸೆಪ್ಟೆಂಬರ್ 29ರ ಬುಧವಾರದಂದು ಸಂಜೆ 5ರಿಂದ 6 ಗಂಟೆಯವರೆಗೆ ಕಸ್ತೂರ್ಬಾ ಆಸ್ಪತ್ರೆಯ ಫೇಸ್ ಬುಕ್ ಚಾನೆಲ್ ನಲ್ಲಿ ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ ಮತ್ತು ಮುಕ್ತ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಲಾಕ್ಡೌನ್ ಮತ್ತು ಕೋವಿಡ್ -19 ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರ ಮೇಲೆ ಪರಿಣಾಮ ಬೀರಿತು. ಇದಕ್ಕೆ ಕಾರಣ ಹೆಚ್ಚಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆರಾಮದಾಯಕ ಜೀವನ ಶೈಲಿ. ಈ ಸಾಂಕ್ರಾಮಿಕ ಸಮಯದಲ್ಲಿ ಜಂಕ್ ಮತ್ತು ಬೀದಿ ಆಹಾರಗಳ ಬಳಕೆ ಕಡಿಮೆಯಾಗಿದ್ದರೂ, ಆರಾಮದಾಯಕ ಕೆಲಸ ಅಥವಾ ಹೆಚ್ಚಾಗಿ ಹೊರಗಡೆ ತಿರುಗಾಡದ ಜೀವನಶೈಲಿಯು ಜನರ ತೂಕವನ್ನು ಹೆಚ್ಚಿಸಲು ಮತ್ತು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. “ಮನೆಯಿಂದ ಕೆಲಸ” ಮತ್ತು “ಆನ್ಲೈನ್ ತರಗತಿಗಳು “, ಕೂಡ ಜನರ ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯದ ಮೇಲೆ ಕಡಿಮೆ ಏಕಾಗ್ರತೆಯೊಂದಿಗೆ ಜೀವನಶೈಲಿಗೆ ಕಾರಣವಾಹಿತು.

ಈ ಮುಕ್ತ ಮಾತುಕತೆಯಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರಾದ ಡಾ. ಅಶ್ವಲ್ ಎ ಜೆ , ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗುರುಪ್ರಸಾದ್ ರೈ , ಮಕ್ಕಳ ಹೃದ್ರೋಗ ತಜ್ಞರಾದ ಡಾ. ಗುಂಜನ್ ಬಂಗ ಮತ್ತು ಪಥ್ಯಾಹಾರ ವಿಭಾಗದ ಮುಖ್ಯಸ್ಥರಾದ ಸುವರ್ಣ ಹೆಬ್ಬಾರ್ ಭಾಗವಹಿಸಲಿದ್ದಾರೆ.

ಈ ಕೆಳಗಿನ ಲಿಂಕ್ ಮತ್ತು ಕ್ಯೂ ಆರ್ ಕೋಡ್ ಬಳಸಿ ಸಾರ್ವಜನಿಕರು ಫೇಸ್ ಬುಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರಶ್ನೆಗಳನ್ನು ಕೇಳಬಹುದು.
https://www.facebook.com/ManipalKasturbaHospital