ಮಣಿಪಾಲ: ನಾಪತ್ತೆಯಾಗಿದ್ದ ಬಾಲಕ ಪತ್ತೆ

ಮಣಿಪಾಲ: ಇಂದು ಮಧ್ಯಾಹ್ನ ಬಳಿಕ ನಾಪತ್ತೆಯಾಗಿದ್ದ ಮಣಿಪಾಲ ದಶರಥ ನಗರ 2ನೇ ಹಂತದ ನಿವಾಸಿ ವಿನುತಾ ಮಂಜುನಾಥ ಎಂಬವರ ಮಗ ಯತಿನ್ ಎಂಬಾತ ಸಂಜೆಯ ವೇಳೆ ಮಲ್ಪೆಯಲ್ಲಿ ಪತ್ತೆಯಾಗಿದ್ದಾನೆ.

ಮಾಜಿ ಗ್ರಾಪಂ ಸದಸ್ಯ ರಾಘವೇಂದ್ರ ಶಾಂತಿನಗರ ಅವರು ಬಾಲಕನನ್ನು ಮಲ್ಪೆಯಲ್ಲಿ ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಈತ ಮನೆಯಲ್ಲಿ ಯಾರಿಗೂ ಹೇಳದೆ ಒಬ್ಬನೇ ಮಲ್ಪೆಗೆ ಹೋಗಿದ್ದ ಎನ್ನಲಾಗಿದೆ. ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಾಲಕನ ಪತ್ತೆಗಾಗಿ ವಾಟ್ಸಾಪ್ ನಲ್ಲಿ ಪೋಟೊ ಹಾಕಿ ಸಂದೇಶ ಕಳುಹಿಸಲಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಯತಿನ್ ಮಲ್ಪೆಯಲ್ಲಿ ಪತ್ತೆಯಾಗಿದ್ದಾನೆ.