ಮಣಿಪಾಲ: ಡ್ರಗ್ಸ್ ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳ ಬಂಧನ

ಮಣಿಪಾಲ: ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ಧ ಸಮರವನ್ನು ಮುಂದುವರೆಸಿರುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದು, ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ ಸಂಭಾವ್ಯ ಅನಾಹುತ ಒಂದನ್ನು ತಪ್ಪಿಸಿದ್ದಾರೆ.

ಮಣಿಪಾಲ ಪಿ.ವಿ ನಗರದ ಅನಂತ ರೆಸಿಡೆನ್ಸಿಯಲ್ಲಿ 5 ಜನರು ಗುಂಪುಗೂಡಿ ಅಕ್ರಮವಾಗಿ ಮಾದಕ ದ್ರವ್ಯ ಹಾಗೂ ಗಾಂಜಾವನ್ನು ಮನೆಯಲ್ಲಿ ಇಟ್ಟುಕೊಂಡು ಅದನ್ನು ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದ್ದು ಈ ಆರೋಪಿಗಳನ್ನು ಮಣಿಪಾಲ ಪಿ.ಐ ಮತ್ತು ತಂಡದವರು ಬಂಧಿಸಿದ್ದಾರೆ.

 

ಆರೋಪಿಗಳಿಂದ 6 ಗ್ರಾಂ ಎಂಡಿಎಂ,110 ಗ್ರಾಂ ಗಾಂಜಾ, 5 ಮೊಬೈಲ್ ಹಾಗೂ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಎಸ್.ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ.