ಮಣಿಪಾಲ: ಕೆನರಾ ಬ್ಯಾಂಕ್ (ಸಿಂಡಿಕೇಟ್ ಬ್ಯಾಂಕ್) ಆಶ್ರಯದಲ್ಲಿ ‘ಕೆನರಾ ಕಾರ್ ಉತ್ಸವ’ ಗ್ರಾಹಕರಿಗೆ ಸ್ಥಳದಲ್ಲೇ ಕಾರು ಸಾಲ ಸೌಲಭ್ಯ ಒದಗಿಸುವ ವಿಶೇಷ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ (ಅ.21 ಮತ್ತು ಅ. 22) ಸಿಂಡಿಕೇಟ್ ಬ್ಯಾಂಕ್ ನ ಮಣಿಪಾಲ ಕಚೇರಿಯ ಬಳಿ ಆಯೋಜಿಸಲಾಗಿದೆ.
ಕಾರು ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಶೇ. 7.30 ಕನಿಷ್ಠ ಬಡ್ಡಿದರದಲ್ಲಿ ಸಾಲವನ್ನು ಒದಗಿಸುತ್ತಿದೆ. ಪ್ರತಿ ಲಕ್ಷಕ್ಕೆ 1524 ರೂ. (84 ತಿಂಗಳು) ತಿಂಗಳ ಇಎಂಐ ಪಾವತಿಸುವ ಅವಕಾಶ ನೀಡುತ್ತಿದೆ. ಅಲ್ಲದೆ, ಗ್ರಾಹಕರಿಗೆ ಸ್ಥಳದಲ್ಲೇ ಸಾಲಸೌಲಭ್ಯವನ್ನು ಕಲ್ಪಿಸುತ್ತಿದೆ.
ಉಡುಪಿಯ ಟಾಪ್ ಹತ್ತು ಕಾರು ಡಿಲರ್ಸ್ ನವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಹಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಳಿಗೆ ಅರುಣ್ ಸಾಗರ್ ಮೊಬೈಲ್ ಸಂಖ್ಯೆ 94498 46864, ಉಮೇಶ್ 94806 97579, ದಿನೇಶ್ ಪಿ. ಹೆಗ್ಡೆ 95034 31061, ಶ್ರೀಧರ್ ಎಂ. 94806 97577 ಸಂಪರ್ಕಿಸಬಹುದು.