ಮಣಿಪಾಲ: ರಾತ್ರಿ ಮನೆ ಬಳಿ ನಿಲ್ಲಿಸಿದ್ದ ಆಟೊ ರಿಕ್ಷಾ ಕಳವು

ಮಣಿಪಾಲ: ಮನೆಯ ಬಳಿ ಬೀಗ ಹಾಕಿ ನಿಲ್ಲಿಸಿದ್ದ ಆಟೊ ರಿಕ್ಷಾವನ್ನು ಕಳವು ಮಾಡಿದ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ನಿವಾಸಿ ಶಂಕರ ಪೂಜಾರಿ (52) ಎಂಬುವವರು ಆಟೊ ಕಳೆದುಕೊಂಡವರು. ಶಂಕರ ಪೂಜಾರಿ ಅ. 31ರಂದು ರಾತ್ರಿ ತನ್ನ ಮನೆಯಲ್ಲಿ ಆಟೊವನ್ನು ಬೀಗಿ ಹಾಕಿ ನಿಲ್ಲಿಸಿದ್ದರು.

ಮರುದಿನ ನ. 1ರಂದು‌ ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಬಳಿ ನಿಲ್ಲಿಸಿದ್ದ ಆಟೊ ರಿಕ್ಷಾ ಇರಲಿಲ್ಲ. ಯಾರೋ ಕಳ್ಳರು ಆಟೊವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಅವರು ದೂರು‌ ನೀಡಿದ್ದಾರೆ. ಕಳವಾದ ಆಟೊದ ಮೌಲ್ಯ 2.50 ಲಕ್ಷ ಎಂದು ಅಂದಾಜಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.