ಕುಂದಾಪುರ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಜಾರಿಗೆ ತರಲಾದ ಮಣಿಪಾಲ ಆರೋಗ್ಯ ಕಾರ್ಡ್ ಮತ್ತು ದಂತ ಆರೋಗ್ಯ ಕಾರ್ಡ್ ಬಿಡುಗಡೆಗೊಂಡಿದ್ದು, ಜನತೆ ಅದರ ಪ್ರಯೋಜನ ಪಡೆಯಬೇಕು ಎಂದು ಮಣಿಪಾಲದ ಸಹಾಯಕ ವ್ಯವಸ್ಥಾಪಕ ಕೃಷ್ಣಪ್ರಸಾದ್ ಬಿ.ಎಸ್. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಗ್ಯ ಕಾರ್ಡ್ ಹೊಂದಿರುವ ರೋಗಿಗಳು ವೈದ್ಯರ ಸಮಾಲೋಚನೆಯಲ್ಲಿ ಶೇ. 50, ಪ್ರಯೋಗಾಲಯದಲ್ಲಿ ಶೇ.30, ಹೊರರೋಗಿ ವಿಭಾಗದಲ್ಲಿ ಶೇ. 20 ಹಾಗೂ ವಿವಿಧ ಸೌಲಭ್ಯಗಳಿಗೆ ರಿಯಾಯಿತಿ ನೀಡಲಾಗುತ್ತದೆ. ಇದು ಸಾಮಾನ್ಯ ಜನರಿಗೂ ಗುಣಮಟ್ಟದ ಚಿಕಿತ್ಸೆ ಪಡೆ ಲಯಲು ಅನುಕೂಲವಾಗುತ್ತದೆ ಎಂದರು.
ಸದ್ಯ ಈ ಸೌಲಭ್ಯವನ್ನು ಡಿಜಿಟಲೈಸೇಶನ್ ಆಗಿ ಪರಿವರ್ತಿಸಲಾಗಿದ್ದು, ಆ್ಯಪ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಮಣಿಪಾಲ ಸಮೂಹದ ಆಸ್ಪತ್ರೆಗಳಾದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ| ಟಿ. ಎಂ. ಎ. ಪೈ ಆಸ್ಪತ್ರೆ ಉಡುಪಿ, ಡಾ| ಟಿ.ಎಂ. ಎ. ಪೈ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ ಹಾಗೂ ಮಣಿಪಾಲ ಮತ್ತು ಮಂಗಳೂರಿನ ಎರಡು ದಂತ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಈ ರಿಯಾಯಿತಿ ಸೌಲಭ್ಯ ಪಡೆಯುವ ಅವಕಾಶವಿದೆ ಎಂದರು.
ನೋಂದಣಿಗಾಗಿ ಅಧಿಕೃತ ಪ್ರತಿನಿಧಿಗಳಾದ ಕುಂದಾಪುರದಲ್ಲಿ ನಾಗರಾಜ ಖಾರ್ವಿ, ರಕ್ಷಿತ್ ಕುಮಾರ್, ಸಚ್ಚಿದಾನಂದ, ಸುರೇಶ್ ಪುತ್ರನ್, ರತ್ನಾಕರ, ಸೈಂಟ್ ಮಿಲಾಗ್ರಿಸ್ ಸೌಹಾರ್ದ, ಕೊಟೇಶ್ವರದಲ್ಲಿ ಎಂ. ಭದ್ರಯ್ಯ ಅವರನ್ನು ಸಂಪರ್ಕಿಸಬಹುದು.
ಕಸ್ತೂರ್ಬಾ ಆಸ್ಪತ್ರೆಯ ಹಿರಿಯ ವ್ಯವಸ್ಥಾಪಕ ಕೆ.ಸಚಿನ್ ಕಾರಂತ್, ಸಹಾಯಕ ಅನಿಲ್ ನಾಯ್ಕ ಉಪಸ್ಥಿತರಿದ್ದರು.